Politics

ಹೌದು ನಾನು ಕಥಾ‌ನಾಯಕನೇ; ಡಿಕೆಶಿಗೆ ಕುಮಾರಸ್ವಾಮಿ ಟಾಂಗ್

ಬೆಂಗಳೂರು; ನಾನೇ ಪ್ರೊಡ್ಯೂಸರ್, ನಾನೇ ಕಥಾನಾಯಕ, ನಾನೇ ಡೈರೆಕ್ಟರ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನಾನು ಕಥಾ‌ನಾಯಕ ಎಂದು ಹೇಳಿದ್ದಾರೆ. ಹೌದು ನಾನು ಕಥಾನಾಯಕನೇ ಎಂದು ಹೇಳಿದ್ದಾರೆ..

  ಕ್ರೇಜಿ ಸ್ಟಾರ್ ರವಿಚಂದ್ರನ್ ಅವರದ್ದು ಮಲಯಾಳಂ ಸಿನಿಮಾ ಕನ್ನಡದಲ್ಲಿ ಬಂತು ಅಲ್ವಾ ದೃಶ್ಯಂ ಈ ತರ ಸ್ಟೋರಿಗಳು ಸಿನಿಮಾದಲ್ಲಿ ಈಗಾಗಲೇ ಬಂದು ಬಿಟ್ಟಿವೆ. ಸ್ಟೋರಿಗಳಿಗೆ ಕಥಾನಾಯಕ ಬೇಕು ಅಲ್ವಾ. ನನ್ನನ್ನೇ ಡಿ.ಕೆ.ಶಿವಕುಮಾರ ಕಥಾನಾಯಕ ಮಾಡಿಕೊಂಡಿದ್ದಾರೆ ಅಲ್ವಾ ಎಂದು ಪ್ರಶ್ನಿಸಿದ್ದಾರೆ..

 

Share Post