BengaluruPolitics

ಕೇಂದ್ರದಿಂದ ಪರಿಹಾರ ಹೆಚ್ಚಳಕ್ಕೆ ಕಾಂಗ್ರೆಸ್ ನಾಯಕರ ಪಟ್ಟು

ಬೆಳಗಾವಿ: ‌ಕರ್ನಾಟಕದಲ್ಲಿ ನೆರೆ, ಪ್ರವಾಹದಿಂದ ಬಳಲುತ್ತಿದ್ರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಪರಿಹಾರ ನೀಡುತ್ತಿರುವದಕ್ಕೆ ಕಾಂಗ್ರೆಸ್‌ ನಾತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿವೃಷ್ಟಿ ಪರಿಹಾರ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಕೈ ಶಾಸಕ ಕೃಷ್ಣ ಬೈರೇಗೌಡ ತೀವ್ರ ಮಳೆಯಿಂದಾಗಿ ಜನ ಸಂಕಷ್ಟಲ್ಲೆ ಸಿಲುಕಿದ್ದಾರೆ. ಮಳೆ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದಕ್ಕೆ ಕೇಂದ್ರದಿಂದ ಬರಬೇಕಾಗ ಪರಿಹಾರ ಧನ ಮಾತ್ರ ಅಲ್ಪ ಪ್ರಮಾಣದಲ್ಲಿ ಬರ್ತಿದೆ ಅಂತ ಕಿಡಿಕಾರಿದ್ರು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕರ್ನಾಟಕಕ್ಕೆ ತೀರಾ ಕಡಿಮೆ ಪರಿಹಾರ ನೀಡಲಾಗ್ತಿದೆ ಇದನ್ನು ಕೂಡಲೇ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ರು. 15ನೇ ಹಣಕಾಸು ಆಯೋಗವು ಎಸ್‌ಡಿಆರ್‌ಎಫ್ ಅಡಿಯಲ್ಲಿ ಮಹಾರಾಷ್ಟ್ರಕ್ಕೆ ನಿಗದಿಪಡಿಸಿದ ರೂ.3,222 ಕೋಟಿಗೆ ಹೋಲಿಸಿದರೆ ರಾಜ್ಯಕ್ಕೆ ವಾರ್ಷಿಕವಾಗಿ ಕೇವಲ 791 ಕೋಟಿ ರೂಪಾಯಿ ನೀಡಲಾಗುತ್ತಿದೆ. ವಿಪತ್ತುಗಳನ್ನು ಗಣನೆಗೆ ತೆಗೆದುಕೊಂಡರೆ, ರಾಜ್ಯಕ್ಕೆ ಹೆಚ್ಚು ಪರಿಹಾರ ಬಿಡುಗಡೆ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಬೆಳೆ ನಷ್ಟದ ಸಮೀಕ್ಷೆಯನ್ನು ಅಧಿಕಾರಿಗಳು ನಡೆಸುತ್ತಿದ್ದರೂ ಅದು ಅಸಮರ್ಪಕವಾಗಿದೆ. ಸಾಕಷ್ಟು ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಮತ್ತೆ ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದ್ರು.

Share Post