ಮೇಕೆದಾಟು ಪಾದಯಾತ್ರೆ : H M ರೇವಣ್ಣಗೆ ಕೋವಿಡ್ ಸೋಂಕು ದೃಢ
ರಾಮನಗರ : ಕಳೆದ ಮೂರು ದಿನದಿಂದ ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಕೈಗೊಂಡಿದೆ. ಕೊರೊನಾ ಸಮಯದಲ್ಲಿ ಮಾಡಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡರೂ ಕೇಳದೆ ಪಾದಯಾತ್ರೆ ಮುಂದುವರಿಸಿದ್ದಾರೆ. ವೀಕೆಂಡ್ ಕರ್ಫ್ಯೂ ನಡುವೆಯೂ ಪಾದಯಾತ್ರೆ ಮಾಡಿರುವ ಕಾಂಗ್ರೆಸ್‌ಗೆ ಈಗ ಸರ್ಕಾರ ಶಾಕ್ ನೀಡಿದೆ. 31 ಜನರ ಮೇಲೆ FIR ದಾಖಲಿಸಿ ಬಿಜೆಪಿ ಸರ್ಕಾರ ಕಾಂಗ್ರೆಸ್‌ನವರಿಗೆ ಶಾಕ್ ನೀಡಿತ್ತು.
ಮೊದಲ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ H M ರೇವಣ್ಣ ಅವರಿಗೆ ಇಂದು ಕೋವಿಡ್ ದೃಢವಾಗಿದೆ. ಇದರಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ರೇವಣ್ಣ ಅವರಿಗೆ ಸೌಮ್ಯ ಗುಣಲಕ್ಷಣಗಳು ಮಾತ್ರ ಕಾಣಿಸಿಕೊಂಡಿದ್ದವು ಎಂದು ವರದಿಯಾಗಿದೆ.
ಮೂರನೇ ಅಲೆ ಹೆಚ್ಚಿದರೆ ಅದಕ್ಕೆ ಕಾಂಗ್ರೆಸ್ ನೇರವಾಗಿ ಹೊಣೆ ಎಂದು ಬಿಜೆಪಿ ಟ್ವೀಟ್ ಮೂಲಕ ಹೇಳುತ್ತಿದೆ. ಕಾಂಗ್ರೆಸ್ಸಿಗರನ್ನು ಬಿಜೆಪಿಯು ತಬ್ಲಿಘಿಗಳಿಗೆ ಹೋಲಿಕೆ ಮಾಡಿದೆ. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣವಾದರು. ಕಾಂಗ್ರೆಸ್ಸಿಗರು ಮೂರನೆ ಅಲೆಗೆ ಕಾರಣರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಈಗ ರೇವಣ್ಣ ಅವರಿಗೆ ಸೋಂಕು ದೃಢವಾಗಿದೆ. ಮುಂದೇನು ಎಂದು ಕಾದು ನೋಡಬೇಕಿದೆ.