ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದ ನಾಲ್ವರ ಸಾವು!
ಬೆಂಗಳೂರು; ಉತ್ತರಾಖಂಡ್ನ ಸಹಸ್ರತಾಲ್ಗೆ ಚಾರಣಕ್ಕೆ ತೆರಳಿದ್ದವರಲ್ಲಿ ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ… ಇದಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ತಿಳಿದುಬಂದಿದೆ.. ಸುಮಾರು 23 ಮಂದಿ ಚಾರಣಕ್ಕೆ ತೆರಳಿದ್ದು, ಇದರಲ್ಲಿ ಉಳಿದ 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ..
ದುರಂತದಲ್ಲಿ ಮೃತಪಟ್ಟ ಕರ್ನಾಟಕದ ನಾಲ್ವರ ಬಗ್ಗೆ ವಿವರ ಇನ್ನೂ ಗೊತ್ತಾಗಿಲ್ಲ.. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬೆಂಗಳೂರಿನಿಂದ ಡೆಹ್ರಾಡೂನ್ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ..
ಓರ್ವ ಚಾರಣಿಗರ ಜೊತೆ ಸಚಿವ ಕೃಷ್ಣ ಬೈರೇಗೌಡ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ.. ಮೃತದೇಹಗಳನ್ನು ಹೊರತೆಗೆಯಲು ಎಲ್ಲಾ ಪ್ರಯತ್ನ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಚಾರಣಿಗರ ರಕ್ಷಣೆಗಾಗಿ ವಾಯುಪಡೆ ಹೆಲಿಕಾಪ್ಟರ್ ಉತ್ತರ ಕಾಶಿ ತಲುಪಿದ್ದು, ಕಾರ್ಯಾಚರಣೆ ಶುರುವಾಗಿದೆ.. 4 ಹೆಲಿಕಾಪ್ಟರ್ ಬಳಸಿ 11 ಚಾರಣಿಗರನ್ನು ಏರ್ಲಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಇದೆ..