40 ಕಮೀಷನ್ ಆರೋಪ ಜಾಹೀರಾತು ಪ್ರಕರಣ; ಸಿಎಂ, ಡಿಸಿಎಂಗೆ ಜಾಮೀನು
ಬೆಂಗಳೂರು; ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಅರೋಪ ಮಾಡಿ ಜಾಹೀರಾತು ನೀಡಿದ್ದ ಆರೋಪದ ಮೇಲೆ ದಾಖಲಾಗಿದ್ದ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿದೆ.. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಇಬ್ಬರೂ ನಾಯಕರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ..
ಈ ಸಂಬಂಧ ಮಾನನಷ್ಟ ಪ್ರಕರಣ ದಾಖಲಾಗಿತ್ತು.. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್, ಇಬ್ಬರೂ ನಾಯಕರಿಗೆ ಸಮನ್ಸ್ ಜಾರಿ ಮಾಡಿತ್ತು.. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕೋರ್ಟ್‌ಗೆ ಹಾಜರಾಗಿದ್ದರು.. ಕೋರ್ಟ್‌ಗೆ ಬಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸರ್ಕಾರಿ ಅಭಿಯೋಜಕರ ಕೊಠಡಿಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಯಿತು. ಆದರೆ, ಅವರು ಬೇಡ ಇಲ್ಲೆ ಕೂರ್ತೀವಿ ಎಂದು ಹೇಳಿ ಸಾಮಾನ್ಯರಂತೆ ನ್ಯಾಯಾಲಯದ ಹೊರಗಡೆ ಕುಳಿತಿದ್ದರು..