News

ಇಂದು ವರ್ಷದ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಗೋಚರವಿಲ್ಲ

ನವದೆಹಲಿ: ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣ ಸಮಯ ಭಾರತದಲ್ಲಿ ರಾತ್ರಿಯಿರುವ ಕಾರಣದಿಂದ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈಗ ಸಂಭವಿಸಲಿರುವ ಸೂರ್ಯಗ್ರಹಣ ಭಾಗಶಃ ಸೂರ್ಯ ಗ್ರಹಣವಾಗಿದೆ.

     ಭಾರತೀಯ ಕಾಲಮಾನದ ಪ್ರಕಾರ, ಏಪ್ರಿಲ್ 30 ಮತ್ತು ಮೇ 1ರ ನಡುವಿನ ರಾತ್ರಿ 12:15 ನಿಮಿಷ ಮತ್ತು 3 ಸೆಕೆಂಡುಗಳಲ್ಲಿ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ರಾತ್ರಿ 2:11 ನಿಮಿಷ 2 ಸೆಕೆಂಡುಗಳಲ್ಲಿ ಸೂರ್ಯಗ್ರಹಣ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಖಗೋಳ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Share Post