ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ!
ದೆಹಲಿ: ವಿರೋಧ ಪಕ್ಷಗಳ ಕೋಲಾಹಲದ ನಡುವೆಯೇ ಚುನಾವಣಾ ಕಾನೂನುಗಳು ಮಸೂದೆ-2021 ಅನ್ನು ಲೋಕಸಭೆಯಲ್ಲಿ ಇಂದು ಅಂಗೀಕರಿಸಲಾಗಿದೆ.ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಸೂದೆಯನ್ನು ಮಂಡಿಸಿದರು. ಈ ವೇಳೆ ಈ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಇದರಿಂದ ವ್ಯಕ್ತಿಯ ಖಾಸಗಿ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮತದಾರರು ವೋಟರ್ ಐಡಿ ಜೊತೆಗೆ ಆಧಾರ್ ಸಂಖ್ಯೆಯನ್ನೂ ಜೋಡಿಸಬಹುದು. ಇದು ಕಡ್ಡಾಯವಲ್ಲ. ಆಧಾರ್ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ಪ್ರಯೋಜನಗಳಿದ್ದು, ನಕಲಿ ಮತದಾನ ಮಾಡುವುದು ತಪ್ಪಲಿದೆ.ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಗುರುತಿನ ಚೀಟಿ ಪಡೆದು ದಾಖಲು ಮಾಡಿಕೊಳ್ಳುತ್ತಾರೆ. ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲಾದರೆ, ಮತ್ತೊಂದು ಬೂತ್‍ಗೆ ಹೋಗಿ ನಕಲಿ ಮತದಾನ ಮಾಡಲು ಸಾಧ್ಯವಿಲ್ಲ.