CrimeNational

ವಿದ್ಯಾರ್ಥಿಗೆ ಪ್ರೇಮ ಪಾಠ ಹೇಳಿಕೊಟ್ಟ ಶಿಕ್ಷಕಿ; ಸೆಕ್ಸ್‌ಗೆ ಪೀಡಿಸುತ್ತಿದ್ದಾಕೆ ವಿರುದ್ಧ ಕೇಸ್‌

ಲಕ್ನೋ; ಟೀಚರ್‌ ಹಾಗೂ ಸ್ಟುಡೆಂಟ್‌ ಲವ್‌ ಸ್ಟೋರಿಗಳನ್ನು ನಾವು ಸಾಕಷ್ಟು ನೋಡಿರುತ್ತೇವೆ. ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯೊಬ್ಬನಿಗೆ ಪ್ರೀತಿಯ ಪಾಠ ಹೇಳಿಕೊಡಲು ಹೋಗಿದ್ದಾಳೆ. ಅಷ್ಟೇ ಏಕೆ, ಸೆಕ್ಸ್‌ಗೆ ಪೀಡಿಸಿದ್ದಾಳೆ. ವಾಟ್ಸಾಪ್‌ ಮೂಲಕ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದಾಳೆ.

ಮ್ಯಾಟರ್ ಕ್ಯಾಂಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಪ್ರತಿಷ್ಠಿತ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಅದೇ ಶಾಲೆಯ ಶಿಕ್ಷಕಿ ಸೆಕ್ಸ್‌ಗೆ ಪ್ರಚೋದಿಸಿದ್ದಾಳೆ. ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಕಾಟ ಕೊಟ್ಟಿದ್ದಾಳೆ. ರಾತ್ರಿ ವೇಳೆಯೆಲ್ಲಾ ಫೋನ್‌ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾಳೆ. ಈ ವಿಚಾರ ವಿದ್ಯಾರ್ಥಿಯ ತಂದೆಗೆ ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶಿಕ್ಷಕಿಗೆ ನೋಟಿಸ್‌ ಕೂಡಾ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

Share Post