National

ನೀರೆಂದು ಭಾವಿಸಿ ಆಸಿಡ್‌ ಕುಡಿದ; ಮುಂದೇನಾಯ್ತು ಗೊತ್ತಾ..?

ವಿಜಯವಾಡ (ಆಂಧ್ರಪ್ರದೇಶ) : ಕುಸಿಯುವ ನೀರೆಂದು ತಪ್ಪಾಗಿ ಭಾವಿಸಿ ಬಾಟೆಲ್‌ನಲ್ಲಿದ್ದ ಆಸಿಡ್‌ ಕುಡಿದು ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡಿರುವ ಘಟನೆ ಕೃಷ್ಣಾ ಜಿಲ್ಲೆ ನಾಗಾಯಾಲಂಕಾ ಬಳಿ ನಡೆದಿದೆ. ವಿಜಯವಾಡದ ಲೊಯೋಲಾ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಕೋಸೂರು ಚೈತನ್ಯ ಎಂಬಾತನೇ ತೀವ್ರ ಅಸ್ವಸ್ಥನಾಗಿರುವ ವಿದ್ಯಾರ್ಥಿ. 

    ವಿಜಯವಾಡದ ಕೆಸರಪಲ್ಲಿ ಸಮೀಪ ಚೈತನ್ಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸಮೀಪದ ಕೂಲ್ ಡ್ರಿಂಕ್ಸ್ ಅಂಗಡಿಗೆ ಹೋಗಿ ಕುಡಿಯುವ ನೀರಿನ ಬಾಟಲ್ ಕೇಳಿದ್ದಾನೆ. ಅಂಗಡಿಯವನು ಚೈತನ್ಯನಿಗೆ ಫ್ರಿಡ್ಜ್‌ನಿಂದ ನೀರಿನ ಬಾಟಲಿಯನ್ನು ತೆಗೆದುಕೊಳ್ಳುವಂತೆ ಹೇಳಿದ್ದಾನೆ. ಚೈತನ್ಯ ಅವಸರದಲ್ಲಿ ನೀರಿನ ಬದಲು ಆ್ಯಸಿಡ್ ತೆಗೆದುಕೊಂಡು ಸೇವಿಸಿದ್ದಾರೆ. ಇದ್ರಿಂದ ಚೈತನ್ಯ ಸ್ಥಳದಲ್ಲೇ ತೀವ್ರ ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

   ವಿಜಯವಾಡದ ಸೂರ್ಯರಾವ್‌ ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚೈತನ್ಯ ಚಿಕಿತ್ಸೆ ಪಡೆಯುತ್ತಿದ್ದು,  ಆತನ ಆಂತರಿಕ ಅಂಗಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Share Post