National

ಸ್ಫೋಟ: 10 ಮಂದಿ ಸಾವು

ಪಾಕಿಸ್ತಾನ: ಕರಾಚಿಯಲ್ಲಿ ನಡೆದ ಕಟ್ಟಡವೊಂದರಲ್ಲಿ ಸ್ಫೋಟಗೊಂಡು ಹಲವು  ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶೇರ್‌ ಶಾ ಪರಾಚಾ ಚೌಕ್‌ ಎಂಬಲ್ಲಿ ಮಧ್ಯಾಹ್ನ ಸ್ಫೋಟ ಉಂಟಾಗಿದೆ. ಈ ಸ್ಫೋಟದಲ್ಲಿ ಸುಮಾರು ೨೦ ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಹಲವು ಮಾಧ್ಯಮಗಳು ವರದಿ ಮಾಡಿದೆ.

ಅಡುಗೆ ಅನಿಲದ ಗ್ಯಾಸ್‌ ಪೈಪ್‌ ಲೈನ್‌ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.
ಕಟ್ಟಡದ ಅವಶೇಷಗಳ ಅಡಿಯಲ್ಲಿ ಅನೇಕರು ಜನರು ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬಾಂಬ್‌ ನಿಷ್ಕ್ರಿಯ ದಳದವರು ಆಗಮಿಸಿದ್ದು, ತಪಾಸಣೆ ನಡೆಸುತ್ತಿದ್ದಾರೆ.

Share Post