National

ನನ್ನ ಕನ್ಯತ್ವ ಮಾರಾಟಕ್ಕಿಟ್ಟು ಸೋನಾಕ್ಷಿ ದೊಡ್ಡ ನಟಿಯಾದಳು; ನಟಿ ಪೂಜಾ ಗಂಭೀರ ಆರೋಪ

ಮುಂಬೈ: ಬಾಲಿವುಡ್‌ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ನನ್ನನ್ನು ಕನ್ಯತ್ವವನ್ನು ಮಾರಾಟಕಿಟ್ಟು ದೊಡ್ಡ ನಟಿಯಾಗಿ ಮೆರೆಯುತ್ತಿದ್ದಾರೆ ಎಂದು ರೂಪದರ್ಶಿ ಹಾಗೂ ಕಿರುತೆರೆ ನಟಿ ಪೂಜಾ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ. ಶತ್ರುಘ್ನ ಕುಟುಂಬದವರು ನನ್ನನ್ನು ಬೇರೆಯವರೊಂದಿಗೆ ಮಲಗಿಸಿ ಸೋನಾಕ್ಷಿಯನ್ನು ಮೊದಲ ಸಿನಿಮಾಗೆ ನಾಯಕಿ ಮಾಡಿದರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ, ಚಿತ್ರರಂಗದಲ್ಲಿ ಇದು ಮಾಮೂಲಿ, ನಿನಗೆ ಹೆಚ್ಚಿನ ಅವಕಾಶಗಳನ್ನು ಕೊಡಿಸುತ್ತೇವೆ ಸೋನಾಕ್ಷಿ ತಾಯಿ ಪೂನಂ ಹೇಳಿದ್ದರು ಎಂದು ಪೂಜಾ ಮಿಶ್ರಾ ಆರೋಪ ಮಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಪೂಜಾ ಮಿಶ್ರಾ, ನನ್ನ ತಂದೆ ಹಾಗೂ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಗೆಳೆಯರಾಗಿದ್ದರು. ಆದರೆ ಶತ್ರುಘ್ನ ಪತ್ನಿ ಪೂನಾಂ ಅವರು ಚಿತ್ರರಂಗಕ್ಕೆ ಬರುವವರು ವೇಶ್ಯೆರಾಗಿರಬೇಕು ಎಂದು ನನ್ನ ತಂದೆಯ ತಲೆಕೆಡಿಸಿದ್ದರು. ಈ ಕಾರಣಕ್ಕೆ ತಂದೆಯವರು ನನಗೆ ಸಿನಿಮಾರಂಗಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದಾಗಿಯೇ ನನಗೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಅವಕಾಶ ಕೈ ತಪ್ಪಿತು ಎಂದು ಆರೋಪ ಮಾಡಿದ್ದಾರೆ.

ಪೂಜಾ ಮಿಶ್ರಾ ಈ ರೀತಿಯ ಗಂಭೀರ ಆರೋಪ ಮಾಡಿದ್ದರೂ, ಸೋನಾಕ್ಷಿ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share Post