ಮಹಿಳಾ ಸದಸ್ಯರೊಂದಿಗೆ ಸೆಲ್ಫಿ; ಸಂಸತ್ತು ಆಕರ್ಷಕ ಎಂದ ಶಶಿ ತರೂರ್ ಕ್ಷಮೆ
ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಶುರುವಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್, ಸಂಸತ್ ಭವನದಲ್ಲಿ ಮಹಿಳಾ ಸಂಶದರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಅದನ್ನು ಟ್ವಿಟರ್ನಲ್ಲಿ ಹಂಚಿಕೊಂಡು, ಸಂಸತ್ತು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳಿದ್ದು ಎಂದು ಪ್ರಶ್ನಿಸಿದ್ದರು. ಇದಕ್ಕೆ ಹಲವಾರು ಆಕ್ಷೇಪಣೆ ಸಲ್ಲಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಶಶಿ ತರೂರ್ ಕ್ಷಮೆ ಕೇಳಿದ್ದಾರೆ.
The whole selfie thing was done (at the women MPs' initiative) in great good humour & it was they who asked me to tweet it in the same spirit. I am sorry some people are offended but i was happy to be roped in to this show of workplace camaraderie. That's all this is. https://t.co/MfpcilPmSB
— Shashi Tharoor (@ShashiTharoor) November 29, 2021
ಕೆಲಸ ಮಾಡಲು ಸಂಸತ್ತು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು? ಎಂದು ಶಶಿ ತರೂರ್ ಬರೆದುಕೊಂಡಿದ್ದರು. ಸಂಸತ್ನ ಆರು ಮಂದಿ ಮಹಿಳಾ ಸದಸ್ಯರೊಂದಿಗೆ ಇಂದು ಬೆಳಗ್ಗೆ ತೆಗೆಸಿಕೊಂಡು ಚಿತ್ರವಿದು ಎಂದು ಅವರು ಚಿತ್ರದೊಂದಿಗೆ ವಿವರಣೆ ನೀಡಿದ್ದರು. ಸಂಸದೆ ಸುಪ್ರಿಯಾ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಯಾನ್ ರೂಹಿ, ಜ್ಯೋತಿ ಮಣಿ ಇದ್ದ ಚಿತ್ರವಿದು.
ಲೋಕಸಭೆಯಲ್ಲಿರುವ ಮಹಿಳೆಯರು ನಿಮ್ಮ ಕಾರ್ಯಕ್ಷೇತ್ರವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರು ಸಂಸದರು. ನೀವು ಅಗೌರವ ತೋರಬಾರದು. ನೀವು ಲೈಂಗಿಕ ಅಭಿರುಚಿ ಹೊಂದಿದ್ದೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿರುದ್ಧ ಟ್ವೀಟ್ಗಳು ಹೆಚ್ಚಾಗುತ್ತಿದ್ದಂತೆ ಶಶಿ ತರೂರ್, ತಮ್ಮ ಟ್ವೀಟ್ಗೆ ಕ್ಷಮಾಪಣೆ ಕೋರಿದ್ದಾರೆ.
ಈ ಸೆಲ್ಫಿ ನಡೆದಿದ್ದು ಒಂದೊಳ್ಳೆ ಭಾವನೆಯಲ್ಲಿ. ಅದೂ ಮಹಿಳಾ ಸಂಸದರ ಇಚ್ಛೆಯೊಂದಿಗೆ. ಅವರು ಹೇಳಿದಂತೆಯೇ ನಾನು ಫೋಟೊವನ್ನು ಟ್ವಿಟರ್ಗೆ ಹಾಕಿದೆ. ಇದರಿಂದ ಕೆಲ ಮಂದಿ ಮನನೊಂದಿದ್ದಾರೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಶಶಿ ತರೂರ್ ಹೇಳಿಕೊಂಡಿದ್ದಾರೆ.