ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ ಪ್ರಣೀತ್‌ಗೆ ಕೊರೊನಾ: ಬಿಎಐ ಮಾಹಿತಿ
ಹೈದರಾಬಾದ್: ಬ್ಯಾಡ್ಮಿಂಟನ್ ಟೂರ್ನಿ ಆರಂಭಕ್ಕೂ ಮುನ್ನವೇ ಆಘಾತಕಾರಿ ಸುದ್ದಿಯನ್ನಿ ಬಿಎಐ ತಿಳಿಸಿದೆ. ಸ್ಟಾರ್ ಆಟಗಾರ ಸಾಯಿ ಪ್ರಣೀತ್‌ಗೆ ಕೊರೊನಾ ವಕ್ಕರಿಸಿದ್ದು ಟೂರ್ನಿಯಿಂದ ಹೊರಗುಳಿದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ ೧೧ರಂದು ದೆಹಲಿಯಲ್ಲಿ ಬ್ಯಾಡ್ಮಿಂಟನ್ ಟೂರ್ನಿ ಆಯೋಜನೆ ಮಾಡಲಾಗಿತ್ತು. ಟೂರ್ನಿಗಾಗಿ ಹೈದರಾಬಾದ್‌ನಿಂದ ದೆಹಲಿಗೆ ತೆರಳಲು ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ವರದಿ ಪಾಸಿಟಿವ್ ಬಂದಿದ್ದು ಆಟದಿಂದ ದೂರ ಸರಿದಿರುವುದಾಗಿ ಪ್ರಣೀತ್ ತಿಳಿಸಿದ್ದಾರೆ. ಶೀತ, ಕೆಮ್ಮು ಇದ್ದುದರಿಂದ ನಾನು ಕೊರೊನಾ ಪರೀಕ್ಷೆಗೆ ಒಳಗಾದ ವರದಿ ಪಾಸಿಟಿವ್ ಬಂದಿದೆ. ಈ ವರ್ಷ ನನಗೆ ತುಂಬಾ ಮಹತ್ವದ್ದಾಗಿದೆ. ಪ್ರತ್ಯೇಕವಾಗಿರಲು ವೈದ್ಯರು ಸೂಚನೆ ನೀಡಿದ್ದಾರೆ. ಸ್ವಲ್ಪ ದಿನಗಳ ಮಟ್ಟಿಗೆ ಪ್ರತ್ಯೇಕವಾಗಿರುತ್ತೇನೆ. ಜೊತೆಗೆ ಜನರು ಎಚ್ಚರವಾಗಿರುವಂತೆ ಸಾಯಿ ಪ್ರಣೀತ್ ಮನವಿ ಮಾಡಿದ್ದಾರೆ.