LifestyleNational

ನೂತನ ಪಾರ್ಲಿಮೆಂಟ್‌ ಕಟ್ಟಡ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ನೂತನ ಪಾರ್ಲಿಮೆಂಟ್‌ ಕಟ್ಟಡವನ್ನು ಉದ್ಘಾಟನೆ ಮಾಡಿದರು. ಇದೇ ವೇಳೆ ಅವರು ನೂತನ ಕಟ್ಟಡ ಕಟ್ಟಿದ ಕಾರ್ಮಿಕರನ್ನು ಸನ್ಮಾನಿಸಿದರು.

ಮೋದಿಯವರು ಐತಿಹಾಸಿಕ ರಾಜದಂಡ ಪ್ರತಿಷ್ಠಾಪನೆ ಮಾಡಿದರು. ಲೋಕಸಭಾ ಸ್ಪೀಕರ್ ಕುರ್ಚಿ ಪಕ್ಕದಲ್ಲಿ ರಾಜದಂಡ ಅಳವಡಿಸಲಾಗಿದ್ದು, ಸುದೀರ್ಘ ಇತಿಹಾಸ ಹೊಂದಿರುವ ಚಿನ್ನದ ರಾಜದಂಡ ಇದಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಪ್ರತೀಕವಾಗಿದ್ದ ಸೆಂಗೊಲ್, 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಶೇಷ ಮಾನ್ಯತೆ ಪಡೆದಿದೆ.

ನೂತನ ಸಂಸತ್ ಭವನ  ಹಲವು ವಿಶೇಷತೆಗಳನ್ನು ಒಳಗೊಂಡಿದೆ. ತ್ರಿಕೋನ ಆಕಾರದ 4 ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಇದ್ದು, ಕಟ್ಟಡದಲ್ಲಿ 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ಪ್ರಮುಖ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಸಂಸದರು, ವಿಐಪಿ ಸಂದರ್ಶಕರು, ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ 22 ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ. ಆದ್ರೆ ಕಾಂಗ್ರೆಸ್‌ ಸೇರಿ 20 ಪಕ್ಷಗಳ ನಾಯಕರು ಈ ಕಾರ್ಯಕ್ರಮವನ್ನು ಬಾಯ್ಕಾಟ್‌ ಮಾಡಿದ್ದಾರೆ.

Share Post