ಒಂದು ದೇಶ, ಒಂದು ಚುನಾವಣೆ ವಿಚಾರ; ಸೆಪ್ಟೆಂಬರ್ 23ಕ್ಕೆ ಮೊದಲ ಸಭೆ
ನವದೆಹಲಿ; ಒಂದು ದೇಶ, ಒಂದು ಚುನಾವಣೆಗೆ ನೀತಿ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ಕೂಡಾ ರಚನೆ ಮಾಡಲಾಗಿತ್ತು. ಅದರ ಮೊದಲ ಸಭೆ ಸೆಪ್ಟೆಂಬರ್ 23ರಂದು ನಡೆಯಲಿದೆ.
ಕೇಂದ್ರ ಗೃಹಸಚಿವ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗುಲಾಂ ನಬಿ ಆಜಾದ್, ಎನ್‌ಕೆ ಸಿಂಗ್, ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಈ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಇನ್ನು ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗವಹಿಸಲಿದ್ದಾರೆ.