National

ತಾಯಿ ಅಂತ್ಯಕ್ರಿಯೆಗೆ ಬಾರದ ಗಂಡುಮಕ್ಕಳು: ಶವ ಹೊತ್ತ ನಾಲ್ವರು ಪುತ್ರಿಯರು

ಒಡಿಸ್ಸಾ: ಕೀರ್ತಿಗೊಬ್ಬ ಮಗ ಬೇಕು, ಸತ್ತರೆ ಕೊಳ್ಳಿ ಇಡೋಕೆ ಮಗ ಬೇಕು, ವಯಸ್ಸಾದ ಮೇಲೆ ಹೆತ್ತವರ ಸೇವೆ ಮಾಡಲು ಮಗ ಬೇಕು ಅಂತಾರೆ. ಆದ್ರೆ ಈ ಘಟನೆ ನೋಡಿದ್ರೆ ಯಾತಕ್ಕಯ್ಯಾ ಗಂಡು ಮಕ್ಕಳು? ಹೆತ್ತಮ್ಮ ಬೀದಿಲಿ ಹೆಣವಾಗಿ ಬಿದ್ರೂ ನೋಡಲು ಬಾರದ ಗಂಡು ಮಕ್ಕಳು ಇದ್ದರೆಷ್ಟು..ಸತ್ತರೆಷ್ಟು..?ಬೇರೆ ದಾರಿ ಕಾಣದೆ ನಾಲ್ವರು ಪುತ್ರಿಯರು ಹೆತ್ತಮ್ಮನ ಹೆಣವನ್ನು ನಾಲ್ಕು ಕಿಲೋಮೀಟರ್‌ ವರೆಗೂ ಹೊತ್ತುಕೊಂಡು ಹೋಗಿ ಅವರೇ ಅಂತ್ಯಸಂಸ್ಕಾರ ಮಾಡಿದ್ದಾರೆ.

ಹೌದು ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ ಇದೇ ಭಾರತ ದೇಶದಲ್ಲಿ ತಾಯಿ ದೇವರು ಅವರಿಗಿಂತ ದೊಡ್ಡ ದೇವರಿಲ್ಲ, ಅಮ್ಮಂದಿರ ದಿನಾಚರಣೆ ಅಂತ ಪೊಳ್ಳು ಮಾತುಗಳಾಡಿ..ಉದ್ದುದ್ದ ಭಾಷಣ ಬಿಗಿದು, ಫೋಟೊ ಹಾಕಿ ಮಾತನಾಡುವ ಮಂದಿ ಇದನ್ನು ನೋಡಿ ತಲೆತಗ್ಗಿಸಲೇಬೇಕು. ಮಕ್ಕಳಿದ್ದು ತಾಯಿ ಸತ್ತ ಮೇಲೆ ನೋಡಲು ಬಾರದೆ ಇರುವ ಗಂಡು ಮಕ್ಕಳಿಗೆ ಏನು ಹೇಳ ಬಯಸುವಿರಿ. ಮೃತ ಜಾತಿ ನಾಯಕ್‌ಗೆ ಒಬ್ಬರಲ್ಲ ಅಂತ ಇಬ್ಬರು ಗಂಡುಮಕ್ಕಳಿದ್ದಾರೆ. ಅಮ್ಮನ ಸಾವಿನ ಸುದ್ದಿ ಕೇಳಿ ನಾವು ಅಂತ್ಯಕ್ರಿಯೆಗೆ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಬೇರೆ ದಾರಿಯಿಲ್ಲದೆ ನಾಲ್ವರು ಪುತ್ರಿಯರೇ ಹೆತ್ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನದವರೆಗೆ ನಾಲ್ಕು ಕಿಲೋಮೀಟರ್‌  ನಡೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

Share Post