National

ಮಧ್ಯಪ್ರದೇಶಕ್ಕೆ ಬಂದವು 8 ಚೀತಾ; ಕೆಲಹೊತ್ತಿನಲ್ಲೇ ಕಾಡಿಗೆ ಬಿಡಲಿದ್ದಾರೆ ಪ್ರಧಾನಿ

ಭೋಪಾಲ್​; ಮಧ್ಯಪ್ರದೇಶಕ್ಕೆ  8 ಚೀತಾಳು ಬಂದಿದ್ದು, ಕೆಲಹೊತ್ತಿನಲ್ಲೇ ಪ್ರಧಾನಿ ಮೋದಿ ಕಾಡಿಗೆ ಬಿಡಲಿದ್ದಾರೆ. ಚೀತಾಗಳು ನಮೀಬಿಯಾದಿಂದ ಗ್ವಾಲಿಯರ್​ಗೆ ಬಂದಿವೆ.

ಗ್ವಾಲಿಯರ್​​ನಿಂದ ಸೇನಾ ಹೆಲಿಕಾಪ್ಟರ್​ ಮೂಲಕ ರವಾನೆ ಮಾಡಲಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳ ರವಾನೆಯಾಗಲಿದೆ. ಐದು ವರ್ಷಗಳ ಚೀತಾ ಪ್ರಾಜೆಕ್ಟ್​ಗೆ 90 ಕೋಟಿ ವೆಚ್ಚವಾಗಲಿದೆ. 4-5 ವರ್ಷ ವಯಸ್ಸಿನ ಚೀತಾಗಳು ನಮೀಬಿಯಾದಿಂದ ಶಿಫ್ಟ್ ಮಾಡಲಾಗಿದ್ದು, ಈಗಾಗಲೇ ಕುನೋ ಸಂರಕ್ಷಿತ ಅರಣ್ಯಕ್ಕೆ ಮೋದಿ ತೆರಳಿದ್ಧಾರೆ.
ಕೆಲ ಹೊತ್ತಿನಲ್ಲೇ ಚೀತಾಗಳನ್ನು ಕಾಡಿಗೆ ಬಿಡಲಿದ್ಧಾರೆ.

ಚೀತಾಗಳು ನಮೀಬಿಯಾದಿಂದ ಗ್ವಾಲಿಯರ್​​ಗೆ ಬಂದಿವೆ. 5 ಹೆಣ್ಣು ಮತ್ತು 3 ಗಂಡು ಚೀತಾಗಳ ಆಗಮನವಾಗಿದೆ. 8 ಚೀತಾಗಳ ವಯಸ್ಸು 4ರಿಂದ 6 ವರ್ಷವಿದೆ. ಪ್ರತಿ ಚೀತಾಗೆ ಪ್ರತಿದಿನ 2-3 ಕೆಜಿ ಮಾಂಸ ಹಾಕಲಾಗುತ್ತೆ, 5 ವರ್ಷಗಳ ಚೀತಾ ಪ್ರಾಜೆಕ್ಟ್​ಗೆ 90 ಕೋಟಿ ವೆಚ್ಚವಾಗಲಿದೆ. ಈ ವರ್ಷಾಂತ್ಯಕ್ಕೆ 12 ಚೀತಾಗಳು ಬರಲಿವೆ. ಕುನೋ ನ್ಯಾಷನಲ್ ಪಾರ್ಕ್​ಗೆ ಬಿಡಲಾಗುತ್ತದೆ.

740 ಚ.ಕಿ.ಮೀ ಪ್ರದೇಶದ ಕಾಡಿಗೆ ಚೀತಾಗಳು ಎಂಟ್ರಿ ಕೊಡಲಿದ್ದು, ಸಂಪೂರ್ಣ ಎಲೆಕ್ಟ್ರಿಕ್​ ಫೆನ್ಸಿಂಗ್​ ಹೊಂದಿರುವ ಕಾಡಾಗಿದೆ. 8 ಚೀತಾಗಳಿಗೆ 1 ತಿಂಗಳು ಕ್ವಾರಂಟೈನ್​ ಸಮಯ ನೀಡುತ್ತದೆ. 5.5 ಕಿ.ಮೀ ಪ್ರದೇಶದಲ್ಲಿ ಚೀತಾಗಳ ಕ್ವಾರಂಟೈನ್ ಮಾಡಲಾಗುತ್ತದೆ. ಹವಾಮಾನಕ್ಕೆ ಹೊಂದಿಕೊಳ್ಳಲು ಕೆಲವು ದಿನ ಬೇಕು. 1952ರಲ್ಲಿ ಈ  ಸಂತತಿಯು ಪೂರ್ಣವಾಗಿ ಅಳಿದುಹೋಗಿದ್ದ, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ  ಚೀತಾಗಳನ್ನು ತಂದಿದ್ಧಾರೆ. 8500 ಕಿಲೋ ಮೀಟರ್​​ನಿಂದ ಚೀತಾ ಸ್ಥಳಾಂತರ ಮಾಡಲಾಗಿದೆ.

 

Share Post