National

ಎರಡನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ; ಬೆಂಗಳೂರಲ್ಲಿ ಲೀಟರ್‌ ಪೆಟ್ರೋಲ್‌ 102.26 ರೂಪಾಯಿ..!

ನವದೆಹಲಿ: ನಿನ್ನೆಯಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಮುಖದಲ್ಲಿ ಸಾಗಿದೆ. ನಿನ್ನೆ ಪೆಟ್ರೋಲ್‌ ಹಾಗೂ ಡೀಸೆಲ್‌ ಲೀಟರ್‌ಗೆ 80 ಪೈಸೆ ಏರಿಕೆ ಮಾಡಲಾಗಿತ್ತು. ಇವತ್ತು ಮತ್ತೆ 80 ಪೈಸೆ ಏರಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 102.26 ಪೈಸೆ ಹಾಗೂ ಲೀಟರ್‌ ಡೀಸೆಲ್‌ ಬೆಲೆ 86.58 ಪೈಸೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ತಲಾ 84 ಪೈಸೆ ಏರಿಕೆಯಾಗಿದೆ. ಇವತ್ತಿನ ಏರಿಕೆ ಸೇರಿಸಿದರೆ ಲೀಟರ್‌ಗೆ ಒಟ್ಟು 1.64 ರೂಪಾಯಿ ಏರಿಕೆ ಆದಂತಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತೈಲ ಬೆಲೆಯಲ್ಲಿ ಬದಲಾವಣೆ ಮಾಡಿರಲಿಲ್ಲ. ಈಗಿನ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಪ್ರಮಾಣವು ಮತ್ತಷ್ಟು ಜಾಸ್ತಿ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಇನ್ನು ಎರಡು ದಿನದ ಬೆಲೆ ಏರಿಕೆಯಿಂದಾಗಿ ದೆಹಲಿಯಲ್ಲಿ ಇಂದು ಪ್ರತಿ ಲೀಟರ್‌ ಪೆಟ್ರೋಲ್‌ ದರ 97.01 ಮತ್ತು ಡೀಸೆಲ್‌ ದರ 88.27 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 111.67 ಮತ್ತು ಡೀಸೆಲ್‌ ದರ 95.85 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ದರ 102.91 ಹಾಗೂ ಡೀಸೆಲ್‌ಗೆ 92.95 ರೂಪಾಯಿ ಮುಟ್ಟಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್‌ 106.34 ರೂಪಾಯಿ ಮತ್ತು ಡೀಸೆಲ್‌ಗೆ 91.42 ರೂಪಾಯಿ ಆಗಿದೆ.

Share Post