ಹಬ್ಬಕ್ಕೆ ಮುನ್ನ ಭಾರಿ ಗ್ಯಾಸ್ ಟ್ರಬಲ್; ವಾಣಿಜ್ಯ ಬಳಕೆ ಸಿಲಿಂಡರ್ 250 ರೂ. ಹೆಚ್ಚಳ..!
ನವದೆಹಲಿ: ಕಳೆದ ಹತ್ತು ದಿನಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಮೊದಲ ದಿನವೇ ಅಡುಗೆ ಅನಿಲ ದರ ಏರಿಕೆ ಮಾಡಿದ್ದ ಅನಿಲ ಕಂಪನಿಗಳು ಇದೀಗ ಯುಗಾದಿ ಹಬ್ಬಕ್ಕೂ ಮುನ್ನ ಮತ್ತೊಂದು ಶಾಕ್ ನೀಡಿವೆ. ವಾಣಿಜ್ಯ ಬಳಕೆಗೆ ಉಪಯೋಗಿಸುವ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 250 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದಾಗಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2200 ರೂಪಾಯಿಗೂ ಹೆಚ್ಚಾಗಿದೆ.
ಬೆಲೆ ಏರಿಕೆಯಿಂದಾಗಿ ದೆಹಲಿಯಲ್ಲಿ 19 ಕೆ.ಜಿ. ಸಿಲಿಂಡರ್ ಬೆಲೆ 2,253 ರೂಪಾಯಿ ಆದರೆ, ಮುಂಬೈನಲ್ಲಿ 2,205 ರೂಪಾಯಿ, ಕೋಲ್ಕತ್ತದಲ್ಲಿ 2,351 ರೂಪಾಯಿ ಹಾಗೂ ಚೆನ್ನೈನಲ್ಲಿ 2,406 ರೂಪಾಯಿ ಆಗಿದೆ.