ನಮಗೆ ಹುಟ್ಟುವ ಮಗುವಿಗೆ ʻಆಪರೇಷನ್ ಗಂಗಾʼ ಎಂದು ನಾಮಕರಣ ಮಾಡ್ತೀವಿ…!
ಕೇರಳ: ಉಕ್ರೇನ್ ಹಾಗೂ ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ನಡುವೆ ಕೀವ್ ಹಾಗೂ ಖಾರ್ಕಿವ್ ನಲ್ಲಿ ಸಅಕಷ್ಟು ಭಾರತೀಯ ವಿದ್ಯರ್ಥಿಗಳು ಸೇರಿದಂತೆ ನಾಗರೀಕರು ಸಿಲುಕಿದ್ದರು. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಭಾರತೀಯ ವಿದೇಶಾಂಗ ಸಚಿವಾಲಯ ಸಾಕಷ್ಟು ಪ್ರಯತ್ನಗಳನ್ನು ಮಾಡಿತು. ಅದರಲ್ಲಿ ಆಪರೇಷನ್ ಗಂಗಾ ಕೂಡ ಒಂದು. ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಸಾವಿರಾರು ಭಾರತೀಯ ಪೌರರನ್ನು ವಾಪಸ್ ಕರೆತಂದಿದ್ದಾರೆ. ಅದರಲ್ಲಿ ಕೇರಳಕ್ಕೆ ಸಂಬಂಧಿಸಿದ ದಂಪತಿಯೂ ಇದ್ದು ಭಅರತ ಸರ್ಕಾರಕ್ಕೆ ಗೌರವ ಸಲ್ಲಿಸಲು ತೀರ್ಮಾನ ಮಾಡಿದ್ದಾರೆ.
ಯುದ್ಧ ಸಂದರ್ಭದಲ್ಲಿ ಕೀವ್‌ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಭಿಜಿತ್ ದಂಪತಿ ಹೀಗೊಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಯುದ್ಧ ಸಂದರ್ಭದಲ್ಲಿ ನಾವು ಬಹಳ ದುಸ್ಥಿತಿಗೆ ಸಿಲುಕಿದ್ವಿ ನನ್ನ ಪತ್ನಿ ಒಂಭತ್ತು ತಿಂಗಳ ಗರ್ಭಿಣಿ. ರೆಸ್ಟೋರೆಂಟ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ನಾವು ಯುದ್ದ ಘೋಷಣೆ ಮಾಡಿದ್ದರಿಂದ ಬಹಳಷ್ಟು ಕಷ್ಟದ ಪರಿಸ್ಥಿತಿಗೆ ಸಿಲುಕಿದ್ದೆವು. ಭಾರತ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಕೀವ್ ನಗರದಿಂದ ಹೊರಬಂದು ಪೋಲೆಂಡ್‌ನಲ್ಲಿ ಆಶ್ರಯ ಪಡೆದಿದ್ದೇವೆ. ನನ್ನ ಪತ್ನಿಯನ್ನು ಇಲ್ಲೇ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ತಿಂಗಳ 26ಕ್ಕೆ ಡೆಲಿವರಿ ದಿನಾಂಕ ನೀಡಿದ್ದಾರೆ. ನಮಗೆ ಹುಟ್ಟುವ ಮಗುವಿಗೆ ʻಗಂಗಾʼ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಈಗ ಭಾರತಕ್ಕೆ ಬಂದಿದ್ದು ನನ್ನ ಪತ್ನಿ ಪೋಲೆಂಡ್‌ನಲ್ಲಿಯೇ ಇದ್ದಾರೆ ಅಲ್ಲಿಯೇ ಡೆಲಿವರಿ ಆಗಲಿದೆ ಎಂದು ಅಭಿಜಿತ್ ತಿಳಿಸಿದ್ದಾರೆ. ಕೀವ್‌ನಿಂದ ಭಾರತಕ್ಕೆ ಬರುವವರೆಗೂ ನಮಗೆ ಒಂದೇ ಒಂದು ರೂಪಾಯಿ ಕೂಡ ಖರ್ಚಾಗಿಲ್ಲ. ಭಾರತ ಸರ್ಕಾರಕ್ಕೆ ನಾನು ಸದಾ ಚಿರರುಣಿ ಎಂದು ದಂಪತಿ ತಿಳಿಸಿದ್ದಾರೆ.