National

ಪ್ರತಿಭಟನೆ; ಕೆ.ಸಿ.ವೇಣುಗೋಪಾಲ್‌ ಸೇರಿ ಹಲವರು ವಶಕ್ಕೆ; ಹರಿದ ಶರ್ಟ್‌

ನವದೆಹಲಿ; ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಸೋನಿಯಾಗಾಂಧಿಯವರಿಗೆ ಇಡಿ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಈ ವೇಳೆ ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಅಸ್ವಸ್ಥತೆಯಿಂದ ಬಳಲಿದಂತೆ ಕಂಡುಬಂತು.

ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಏಳು ಬಸ್‌ಗಳಲ್ಲಿ ತುಂಬಿಸಿಕೊಂಡು ಹೋದರು. ಇಡಿ ಕಚೇರಿ ಬಳಿ ಬಂದಿದ್ದ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಡಿ.ಕೆ.ಸುರೇಶ್ ಮತ್ತಿತರನ್ನು ಕೂಡಾ ವಶಕ್ಕೆ ಪಡೆಯಲಾಯಿತು.ಈ ವೇಳೆ ಕೆ.ಸಿ.ವೇಣುಗೋಪಾಲ್‌ ಅವರ ಶರ್ಟ್‌ ಹರಿದಿದೆ. ಜೊತೆಗೆ ಅವರು ಅಸ್ವಸ್ಥರಾದಂತೆ ಕಂಡುಬಂದರು.

Share Post