ಪಂಜಾಬ್‌ನ ಇತಿಹಾಸದಲ್ಲೇ ಕಂಡು ಕೇಳರಿಯದ ಘೋಷಣೆ ಮಾಡ್ತೇನೆ-ಪಂಜಾಬ್ ಸಿಎಂ
ಪಂಜಾಬ್: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಇನ್ನೂ ಎರಡು ದಿನ ಕಳೆದಿಲ್ಲ. ಆಗಲೇ ಸಂಚಲನ ಮೂಡಿಸುವ ಘೋಷಣೆಯೊಂದು ಹೊರಬಿದ್ದಿದೆ. ಪಂಜಾಬ್ ಜನತೆಯನ್ನು ಗಮನದಲ್ಲಿಟ್ಟುಕೊಂಡು ಸಂವೇದನಾಶೀಲ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಗವಂತ್ ಮಾನ್ ಹೇಳಿದ್ದಾರೆ. ಮಾರ್ಚ್ 17, 2022 ರಂದು ಟ್ವೀಟ್ ಮಾಡಿ ಇಲ್ಲಿಯವರೆಗೂ ಯಾರೂ ತೆಗೆದುಕೊಳ್ಳದ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಪಂಜಾಬ್ ಸಿಎಂ ತಿಳಿಸಿದ್ದಾರೆ. ಪಂಜಾಬ್ ಇತಿಹಾಸದಲ್ಲಿ ಇದುವರೆಗೂ ಇಂತಹ ನಿರ್ಧಾರವನ್ನು ಯಾರೂ ತೆಗೆದುಕೊಂಡಿಲ್ಲ. ಸದ್ಯದಲ್ಲೇ ಅಂತಹ ಘೋಷಣೆ ಮಾಡುವುದಾಗಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ.
पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
कुछ ही देर में एलान करूँगा…।
— Bhagwant Mann (@BhagwantMann) March 17, 2022
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಗೆಲುವಿನ ನಗೆ ಬೀರಿದೆ. 117 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಎಎಪಿ ಒಟ್ಟು 92 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಪೊರಕೆ ಹೊಡೆತಕ್ಕೆ ನಲುಗಿ ಹೋಗಿದ್ದವು. ಹಾಸ್ಯನಟನಿಂದ ಮುಖ್ಯಮಂತ್ರಿಯವರೆಗೆ ಭಗವಂತ್ ಮಾನ್ ಜೀವನದಲ್ಲಿ ಅದೆಷ್ಟೋ ಏಳು-ಬೀಳುಗಳಿವೆ. ಆದರೂ ಸೋಲಿಗೆ ಶರಣಾಗದೆ ಟೀಕಾಕಾರರಿಗೆ ಗೆಲುವಿನ ಮೂಲಕವೇ ಉತ್ತರ ನೀಡಿದ್ದಾರೆ.