National

ಪ್ರೀತಿಗೆ ಒಪ್ಪದ ಪೋಷಕರು; ತಂದೆ-ತಾಯಿ ಇಬ್ಬರನ್ನೂ ಕೊಲೆ ಮಾಡಿದ ಬಾಲಕಿ

ಬಿಜ್ನೋರ್: ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ‌ ಬಾಲಕಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ತಂದೆ-ತಾಯಿಗಳನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ ನಲ್ಲಿ ನಡೆದಿದೆ. ಈ ಸಂಬಂಧ 17 ವರ್ಷದ ಬಾಲಕಿ ಮತ್ತು 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಇಬ್ಬರೂ ಅಪ್ರಾಪ್ತರಾಗಿದ್ದು, ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರ ಬಾಲಕಿಯ ಪೋಷಕರಿಗೆ ಗೊತ್ತಾಗಿದ್ದು, ಬುದ್ಧಿ ಹೇಳಿದ್ದರು. ಹೀಗಿರುವಾಗಲೇ  ಮಾರ್ಚ್‌ 6ರಂದು ಬಾಲಕಿ ತಂದೆ ಅವರತ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ಜನವರಿ 15ರಂದು ಬಾಲಕಿಯ ತಾಯಿ ಕೂಡಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಹೀಗಾಗಿ ಮೃತರ ಸಂಬಂಧಿಕರು ಈ ಎರಡೂ ಸಾವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಬಾಲಕಿ ಹಾಗೂ ಬಾಲಕನನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ.

Share Post