ಪಟ್ಟು ಸಡಿಲಿಸದ ಡಿ.ಕೆ.ಶಿವಕುಮಾರ್; ಬೇಕಾದರೆ ಖರ್ಗೆಯವರೇ ಸಿಎಂ ಆಗಲಿ ಎಂದು ಡಿಕೆಶಿ
ನವದೆಹಲಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಟ್ಟು ಸಡಿಲಿಸುತ್ತಿಲ್ಲ. ನನಗೇ ಸಿಎಂ ಸ್ಥಾನ ಸಿಗಬೇಕು. ನಾನು ಪಕ್ಷವನ್ನು ಸಂಘಟಿಸಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಹೀಗಾಗಿ ನನಗೇ ಸಿಎಂ ಸ್ಥಾನ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆ ಮುಂದೆ ಒತ್ತಡ ಹೇರುತ್ತಿದ್ದಾರೆ.
ಹೈಕಮಾಂಡ್ ಹಲವು ಸೂತ್ರಗಳನ್ನು ಡಿ.ಕೆ.ಶಿವಕುಮಾರ್ ಮುಂದಿಟ್ಟಿದ್ದು, ಇದನ್ನು ಡಿ.ಕೆ.ಶಿವಕುಮಾರ್ ಒಪ್ಪುತ್ತಿಲ್ಲ. ಬದಲಾಗಿ, ಏನಾದರೂ ಆಗಲೀ ನಾನೇ ಸಿಎಂ ಆಗಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ನಾನು ಸಿಎಂ ಆಗೋದು ಬೇಡ ಎನ್ನುವುದಾದರೆ, ಖರ್ಗೆಯವರೇ ಸಿಎಂ ಆಗಲಿ ಎಂದೂ ಡಿಕೆಶಿ ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.