National

ಕೇಂದ್ರ ಬಜೆಟ್‌ ಅಧಿವೇಶನ; ಇಂದಿನಿಂದ ಎರಡನೇ ಭಾಗದ ಕಲಾಪ

ನವದೆಹಲಿ: ಕೇಂದ್ರ ಬಜೆಟ್‌ ಅಧಿವೇಶನದ ಎರಡನೇ ಭಾಗ ಇವತ್ತಿನಿಂದ ಆರಂಭವಾಗುತ್ತಿದೆ. ಈ ಕಲಾಪದಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಬಜೆಟ್‌ಗೆ ಅನುಮೋದನೆ ಪಡೆಯಲು ಸರ್ಕಾರ ಮುಂದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಮ್ಮು ಕಾಶ್ಮೀರದ ಆಯವ್ಯಯವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಇನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಷ್ಯಾ–ಉಕ್ರೇನ್ ಯುದ್ಧದಲ್ಲಿ ಭಾರತ ತೆಗೆದುಕೊಂಡ ನಿಲುವಿನ ಬಗ್ಗೆ ಸದನಕ್ಕೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಇತ್ತ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷಗಳು ಕೂಡಾ ಸಜ್ಜಾಗಿವೆ. ನಿರುದ್ಯೋಗ, ಇಪಿಎಫ್‌ ಬಡ್ಡಿದರ ಕಡಿತ, ಉಕ್ರೇನ್‌ನಿಂದ ಭಾರತೀಯರ ತೆರವು ಮೊದಲಾದ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಜೆಟ್‌ಗೆ ಅನುಮೋದನೆ ಪಡೆದ ಬಳಿಕ ಏಪ್ರಿಲ್ 8ರಂದು ಅಧಿವೇಶನ ಮುಕ್ತಾಯವಾಗಲಿದೆ.

Share Post