ಖರ್ಗೆ ಒಲಿಯುತ್ತಾ ಎಐಸಿಸಿ ಅಧ್ಯಕ್ಷ ಗಾದಿ..?; ತರೂರ್ ಬಣದ ದೂರೇನು..?
ನವದೆಹಲಿ; ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದಲ್ಲಿ ಮತದಾನದ ವೇಳೆ ಭಾರಿ ಅಕ್ರಮ ನಡೆದಿಎದೆ ಎಂದು ಶಶಿ ತರೂರ್ ಪರವಾದ ಎಲೆಕ್ಷನ್ ಏಜೆಂಟ್ ಆರೋಪ ಮಾಡಿದ್ದು, ಈ ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥರಾಗಿದ್ದ ಮಧುಸೂಧನ್ ಮಿಸ್ತ್ರಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಚಲಾಯಿಸಲಾದ ಎಲ್ಲಾ ಮತಗಳನ್ನೂ ಅಮಾನ್ಯ ಮಾಡಬೇಕು ಎಂದು ಇದೇ ವೇಳೆ ಮನವಿ ಮಾಡಲಾಗಿದೆ. ಪಂಜಾಬ್ ಹಾಗೂ ತೆಲಂಗಾಣದಲ್ಲೂ ಇದೇ ರೀತಿಯ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಇನ್ನು ಈಗಾಗಲೇ ಶೇಕಡಾ 60ರಷ್ಟು ಮತ ಎಣಿಕೆ ಪೂರ್ತಿಯಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅತ್ಯಧಿಕ ಮತಗಳು ಲಭಿಸಿವೆ ಎಂದು ಹೇಳಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.