National

ಬಿಪಿನ್‌ ರಾವತ್‌ ಅವರ ಅಂತಿಮ ಯಾತ್ರೆ

ದೆಹಲಿ: ಚಾಪರ್‌ ದುರಂತದಲ್ಲಿ ವಿಧಿವಶರಾದ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್‌ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯುತ್ತಿದೆ. ರಾವತ್‌ ಅವರ ಕಾಮರಾಜ್‌ ನಿವಾಸದಿಂದ ಅಂತಿಮ ಯಾತ್ರೆ ಹೊರಟಿದೆ. ಹೂಗಳಿಂದ ಅಲಂಕೃತವಾದ ತೆರೆದ ಸೇನಾ ವಾಹನದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯುತ್ತಿದೆ. 3.30ಕ್ಕೆ ಬ್ರಾರ್‌ ಸ್ಕ್ವೇರ್‌ ಅಂತಿಮ ಯಾತ್ರೆ ತಲುಪಲಿದೆ, ಸಂಜೆ 4ರವರೆಗೆ ಕುಟುಂಬಸ್ಥರು,  4.15ರಿಂದ ವಿಐಪಿಗಳಿಂದ ನಮನ ಸಲ್ಲಿಸಲಾಗುತ್ತದೆ. 4.30ರಿಂದ 4.45ರವರೆಗೆ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ. 4.45ರಿಂದ ರಾವತ್‌ ಅವರಿಗೆ ಸಕಲ ಸೇನಾ ಗೌರವ 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಕೆ. ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಅಂತ್ಯಕ್ರಿಯೆಯಲ್ಲಿ 800 ಜನರಿಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ.

Share Post