LifestyleNational

ಬರಲಿದೆ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿ; 50 ಸಾವಿರ ಕೋಟಿ ರೂಪಾಯಿ ಯೋಜನೆ..!

ಬೆಂಗಳೂರು; ರಾಷ್ಟ್ರೀಯ ಹೆದ್ದಾರಿ-4 ಬೆಂಗಳೂರು-ಪುಣೆ ರಸ್ತೆಯನ್ನು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನಾಗಿ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿಯ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಈ ಹೆದ್ದಾರಿ ರಾಜ್ಯ 12 ಜಿಲ್ಲೆಗಳಲ್ಲಿ ಹಾದುಹೋಗಿದ್ದು, ಈ ಜಿಲ್ಲೆಗಳ ಜನಕ್ಕೆ ಅನುಕೂಲ ಕಲ್ಪಿಸಲಿದೆ. ಜೊತೆಗೆ ಈ ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ಓಡಾಡುವುದರಿಂದ ಹೆಚ್ಚು ಟ್ರಾಫಿಕ್‌ ಜಾಮ್‌ ಉಂಟಾಗುತ್ತಿತ್ತು. ರಸ್ತೆ ಮೇಲ್ದೆರ್ಜೆಗೇರಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಬಳಿಯ ಮತಗಡಹಳ್ಳಿ ಬಳಿ ಆರಂಭವಾಗಿದ್ದು, ಮಹಾರಾಷ್ಟ್ರದ ಪುಣೆಯ ಕುರ್ಸೆ ಬಳಿ ಅಂತ್ಯವಾಗುತ್ತೆ. ಈ ರಸ್ತೆಯನ್ನು ಮೇಲ್ದೆರ್ಜೆಗೇರಿಸುವ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಸಮೀಕ್ಷೆಗಳು ನಡೆದಿವೆ. ಹೆದ್ದಾರಿ ಪ್ರಾಧಿಕಾರದಿಂದಲೂ ಅನುಮೋದನೆ ಸಿಕ್ಕಿದೆ. ಡಿಸೆಂಬರ್‌ ವೇಲೆ ಯೋಜನಾ ವರದಿ ಕೂಡಾ ಸಲ್ಲಿಕೆಯಾಗಲಿದೆ ಎಂದು ತಿಳಿದುಬಂದಿದೆ. ಯೋಜನೆಯಂತೆ ಈ ಹೆದ್ದಾರಿಯಲ್ಲಿ 6 ರೈಲ್ವೆ ಓವರ್ ಬ್ರಿಡ್ಜ್‌ಗಳು ಬರಲಿವೆ. 14 ಕ್ರಾಸಿಂಗ್ ಪಾಯಿಂಟ್ಸ್‌, 22 ಇಂಟರ್ ಚೇಂಜಸ್‌, 55 ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿದುಬಂದಿದೆ.

Share Post