ಉಕ್ರೇನ್‌ನಲ್ಲಿ ಬಾಂಗ್ಲಾದ 9 ಮಂದಿ ರಕ್ಷಣೆ; ಮೋದಿಗೆ ಧನ್ಯವಾದ ಸಲ್ಲಿಸಿದ ಶೇಖ್ ಹಸೀನಾ
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದರಿಂದ, ಅಲ್ಲಿರುವ ವಿವಿಧ ದೇಶಗಳ ಪ್ರಜೆಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಾತೃದೇಶಕ್ಕೆ ಬರಲು ಕಷ್ಟಪಡುತ್ತಿದ್ದಾರೆ. ಭಾರತೀಯರು ಕೂಡಾ ೨೦ ಸಾವಿರ ಮಂದಿ ಉಕ್ರೇನ್‌ನಲ್ಲಿದ್ದರು. ಭಾರತ ಸರ್ಕಾರ ಆಪರೇಷನ್ ಗಂಗಾ ಮೂಲಕ ಬಹುತೇಕರನ್ನು ಭಾರತಕ್ಕೆ ಕರೆತಂದಿದೆ. ಜೊತೆಗೆ ಬಾಂಗ್ಲಾ, ನೇಪಾಳದ ಪ್ರಜೆಗಳನ್ನು ರಕ್ಷಿಸಿದೆ.
ಇನ್ನು ಉಕ್ರೇನ್‌ನಲ್ಲಿ ಸಿಲುಕಿದ್ದ ಬಾಂಗ್ಲಾದೇಶದ 9 ಮಂದಿಯನ್ನು ಭಾರತ ರಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.