National

ಸೇನಾ ಹೆಲಿಕಾಪ್ಟರ್‌ ಪತನ; ಒಬ್ಬ ಪೈಲಟ್‌ ಸಾವು

ಬಂಡಿಪೋರಾ; ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಕಣಿವೆಯ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಸೆನಾ ಹೆಲಿಕಾಪ್ಟರ್‌ ಒಂದು ಪತನವಾಗಿದೆ. ಘಟನೆಯಲ್ಲಿ ಒಬ್ಬ ಪೈಲಟ್‌ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.

ಶುಕ್ರವಾರ ಮಧ್ಯಾಹ್ನ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ವೇಳೆ ಸ್ಥಳದಲ್ಲಿ ಯಾರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್‌ ಹಾಗೂ ಕೋ ಫೈಲಟ್‌ ಬದುಕಿರಬಹುದೆಂದು ಅಂದಾಜಿಸಲಾಗಿತ್ತು. ಆದ್ರೆ ಶೋಧ ಕಾರ್ಯ ನಡೆಸಿದಾಗ ಒಬ್ಬ ಪೈಲಟ್‌ ಸಾವನ್ನಪ್ಪಿರುವುದು ಕಂಡುಬಂದಿದೆ. ಕಾಡಿನ ನಡುವೆ ಪೈಲಟ್‌ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಪೈಲಟ್‌ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

Share Post