ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆಗಳಿಗೆ ಚಾಲನೆ; 26ಕ್ಕೆ ಏರಿದ ಜಿಲ್ಲೆಗಳ ಸಂಖ್ಯೆ
ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಜಿಲ್ಲೆಗಳ ಸಂಖ್ಯೆ ಈಗ ಡಬಲ್ ಆಗಿದೆ. ಜಿಲ್ಲೆಗಳು ವಿಶಾಲವಾಗಿದ್ದರಿಂದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ಹೊಸ 13 ಜಿಲ್ಲೆಗಳಿಗೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ಆಂಧ್ರಪ್ರದೇಶದಲ್ಲಿ ಜಿಲ್ಲೆಗಳ ಸಂಖ್ಯೆ 26ಕ್ಕೇರಿದೆ.
ಅಖಂಡ ಆಂಧ್ರಪ್ರದೇಶ ವಿಭಜನೆ ನಂತರ ಆಂಧ್ರಪ್ರದೇಶಕ್ಕೆ 13 ಜಿಲ್ಲೆಗಳು ದಕ್ಕಿದ್ದವು. ಆದರೆ ಆ ಜಿಲ್ಲೆಗಳು ತುಂಬಾ ವಿಶಾಲವಾಗಿದ್ದರಿಂದ ಅವುಗಳನ್ನು ವಿಭಜನೆ ಮಾಡಿ, ಜಿಲ್ಲೆಗಳನ್ನು ಹೆಚ್ಚು ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 42 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ.