HealthNational

ಮಲಗಿದ್ದ ಯುವತಿಯ ಮೇಲೆ ಹತ್ತಿದ ಬೃಹತ್‌ ಹಾವು!; ಮುಂದೇನಾಯ್ತು..?

ಮಳೆಗಾಲದಲ್ಲಿ ಬೆಚ್ಚಗಿನ ಪ್ರದೇಶಗಳನ್ನು ಹುಡುಕಿಕೊಂಡು ಹಾವುಗಳು ಬರುತ್ತವೆ.. ಹೀಗಾಗಿ ಹಾವುಗಳು ಮಳೆಗಾಲದಲ್ಲಿ ಮನೆಗಳ ಬಳಿ ಸುಳಿದಾಡುತ್ತವೆ.. ಇಂತಹ ಸಮಯದಲ್ಲಿ ಇಂದಷ್ಟು ಅವಾಂತರಗಳು ಕೂಡಾ ಸೃಷ್ಟಿಯಾಗುತ್ತವೆ.. ಅದಕ್ಕೊಂದು ಉದಾಹರಣೆ ಈ ಸುದ್ದಿ.. ಯುವತಿಯೊಬ್ಬಳು ಮಲಗಿದ್ದಾಗ ಎಲ್ಲಿಂದಲೋ ಬಂದ ಬೃಹತ್ ಹಾವು ಆಕೆಯ ದೇಹದ ಮೇಲೆ ಹರಿದಾಡಿದೆ.. ಇದರ ವಿಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ..

ವೈರಲ್ ಆಗಿರುವ ವಿಡಿಯೋ ಪ್ರಕಾರ ಯುವತಿಯೊಬ್ಬಳು ಹುಲ್ಲಿನ ಮೇಲೆ ಚಾಪೆ ಹಾಸಿ ಮಲಗಿದ್ದಾಳೆ. ಅವಳು ಗಾಢ ನಿದ್ರೆಯಲ್ಲಿದ್ದಾಗ ಒಂದು ದೊಡ್ಡ ಹಾವು ಎಲ್ಲಿಂದಲೋ ಬಂದಿದೆ.  ಅವಳ ಮೇಲೆ ಹರಿದಾಡಿದೆ. ಅಲ್ಲದೇ ಆಕೆಯ ಕುತ್ತಿಗೆ ಬಳಿಗೂ ಹಾವು ಬಂದಿದೆ.. ಇದರಿಂದ ಯುವತಿ ಏಕಾಏಕಿ ಬೆಚ್ಚಿಬಿದ್ದಿದ್ದಾಳೆ. ಹಾವನ್ನು ನೋಡಿ ಗಾಬರಿಯಾಗಿದ್ದಾಳೆ. ಆದರೆ ಹಾವು ಯುವತಿಗೆ ಯಾವುದೇ ತೊಂದರೆಯಾಗದಂತೆ ಹೊರಟಿದ್ದರಿಂದ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ.. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

Share Post