National

ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮನೆ ಬಳಿ ಬಾಂಬ್‌ ಎಸೆತ..!

ಪಾಟ್ನಾ: ಬಿಹಾರದ ನಳಂದಾದ ಜನಸಭಾ ಪ್ರದೇಶದಲ್ಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದ ಬಳಿ ಬಾಂಬ್ ಎಸೆಯಲಾಗಿದೆ. ಆದರೆ ಆ ಬಾಂಬ್‌ ಸ್ಫೋಟಗೊಂಡಿಲ್ಲ, ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಘಟನೆಗೆ ಸಂಬಂಧಿಸಿದಂತೆ ಪಟ್ನಾ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಪಾಟ್ನಾದ ಭಕ್ತಿಯಾರ್‌ಪುರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಜೆಡಿಯು ವರಿಷ್ಠರ ಮೇಲೆ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

Share Post