ಹೊಸವರ್ಷಾಚರಣೆ; ತೆಲಂಗಾಣದಲ್ಲಿ ರಾತ್ರಿ 1ರವರೆಗೂ ಬಾರ್ ಓಪನ್..!
ಹೈದರಾಬಾದ್: ಕೊರೋನಾ ಹಾಗೂ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಕಡೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಆದ್ರೆ ತೆಲಂಗಾಣ ಸರ್ಕಾರ ಇದಕ್ಕೆ ವಿರುದ್ಧವಾದ ತೀರ್ಮಾನ ಕೈಗೊಂಡಿದೆ. ಎಲ್ಲಾ ಸರ್ಕಾರಗಳೂ, ಹಸೊ ವರ್ಷಾಚರಣೆ ಬೇಡ ಎನ್ನುತ್ತಿದ್ದಂತೆ, ಇಲ್ಲಿ ಮಾತ್ರ ಡಿಸೆಂಬರ್ 31 ರ ರಾತ್ರಿ 1 ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಡಿಸೆಂಬರ್ 31ರ ರಾತ್ರಿ 12 ಗಂಟೆತನಕ ಎಲ್ಲಾ ವೈನ್ಸ್ ಹಾಗೂ ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೆ ತೆಲಂಗಾಣದಲ್ಲಿ ಅವಕಾಶ ನೀಡಲಾಗಿದೆ. ಇನ್ನು ಪ್ರವಾಸೋದ್ಯಮ ಇಲಾಖೆ ಅನುಮತಿ ಇರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ 1 ಗಂಟೆಯತನಕ ಮದ್ಯ ಮಾರಾಟ ಅವಕಾಶವಿದೆ. ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.