ಮನ್ ಕೀ ಬಾತ್ ಸರ್ಕಾರದ ಕೆಲಸವನ್ನು ಎತ್ತಿ ತೋರಿಸುವುದಿಲ್ಲ
ದೆಹಲಿ: ಮನ್ ಕೀ ಬಾತ್ ಕಾರ್ಯಕ್ರಮದ 84ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಕುಟುಂಬವಾಗಿ ಒಟ್ಟಿಗೆ ನಿಂತಿರುವ ಭಾರತವನ್ನು ಶ್ಲಾಘಿಸಿದ್ದಾರೆ. ನವೆಂಬರ್ 28 ರಂದು ಪ್ರಸಾರವಾದ ಮನ್ ಕೀ ಬಾತ್‌ನ ಕೊನೆಯ ಸಂಚಿಕೆಯಲ್ಲಿ, 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ವಿಜಯ ಸಾಧಿಸಿದ 50 ನೇ ವಾರ್ಷಿಕೋತ್ಸವದ ಮೊದಲು ಸಶಸ್ತ್ರ ಪಡೆಗಳನ್ನು ಪ್ರಧಾನಿ ಶ್ಲಾಘಿಸಿದರು. ಇಂದು ಪ್ರಸಾರವಾದ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಮೋದಿ ಮನ್ ಕೀ ಬಾತ್ ಸರ್ಕಾರದ ಕೆಲಸವನ್ನು ಎತ್ತಿ ತೋರಿಸುವುದಲ್ಲ, ಅದನ್ನು ಸುಲಭವಾಗಿ ಮಾಡಬಹುದಿತ್ತು. ಬದಲಾಗಿ, ಇದು ತಳಮಟ್ಟದ ಬದಲಾವಣೆ ಮಾಡುವವರ ಸಾಮೂಹಿಕ ಪ್ರಯತ್ನಗಳ ಬಗ್ಗೆ ಆಗಿದೆ ಎಂದರು