International

UKRAINE_RUSSIA WAR; ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ ಸೇನೆ

ಕೀವ್‌: ಹತ್ತು ದಿನಗಳಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದ್ದ ರಷ್ಯಾ ಸೇನೆ ಇಂದು ತಾತ್ಕಾಲಿ ಕದನ ವಿರಾಮ ಘೋಷಣೆ ಮಾಡಿದೆ. ಇಂದು ಬೆಳಗ್ಗೆ 11.30 ರಿಂದ ಕದನ ವಿರಾಮ ಘೋಷಿಸಲಾಗಿದೆ. 

 

ನಾಗರಿಕ ಸುರಕ್ಷತೆ ದೃಷ್ಟಿಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇಂದು ಬೆಳಗ್ಗೆಯಿಂದ ರಷ್ಯಾ ಸೈನಿಕರು, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಿದ್ದಾರೆ. ರಷ್ಯಾ ಯುದ್ಧ ಘೋಷಣೆಯಿಂದಾಗಿ ಹಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ರಷ್ಯಾದಲ್ಲೂ ಕUಡಾ ಹಲವು ಸಂಘಟನೆಗಳು ಯುದ್ಧವ ವಿರುದ್ಧ ಹೋರಾಟ ಶುರು ಮಾಡಿದ್ದವು. ಈ ಬೆನ್ನಲ್ಲೇ ರಷ್ಯಾ, ತಾತ್ಕಾಲಿಕ ಯುದ್ಧ ವಿರಾಮ ಘೋಷಣೆ ಮಾಡಿದೆ.

ಯುದ್ಧ ವಿರಾಮ ಘೊಷಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದು ಸುಲಭವಾಗಲಿದೆ. ಕೀವ್‌ ಮತ್ತು ಕಾರ್ಕೀವ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಈಗ ಕರೆತರುವ ಸಾಧ್ಯತೆ ಇದೆ.

 

Share Post