International

ಇಸ್ರೇಲ್‌ ಪರ ಹೋರಾಡಲು ಹೊರಟ ಪತ್ರಕರ್ತ; ಕುಟುಂಬ ತೊರೆದು ಹೊರಟ

ಇಸ್ರೇಲ್‌; ಕಳೆದ ಕೆಲ ದಿನಗಳಿಂದ ಹಮಾಸ್ ಭಯೋತ್ಪಾದಕರು ಇಸ್ರೇಲ್​​ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಉತ್ತರವಾಗಿ ಇಸ್ರೇಲ್​​ ಕೂಡ ಗಾಜಿ ಪಟ್ಟಿಯ ಮೇಲೆಯು ದಾಳಿ ನಡೆಸಿದೆ. ಹಮಾಸ್‌ ಉಗ್ರರ ದಾಳಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ಪ್ರಜೆಗಳು ಕೂಡಾ ಯುದ್ಧದಲ್ಲಿ ಹೋರಾಡಲು ಸನ್ನದ್ಧರಾಗುತ್ತಿದ್ದಾರೆ. ಅದರ ಭಾಗವಾಗಿ, ಇಸ್ರೇಲ್‌ ಪತ್ರಕರ್ತರೊಬ್ಬರು ತನ್ನ ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಕುಟುಂಬವನ್ನು ತ್ಯಜಿಸಿ ಅವರು ಸೈನಿಕರಿಗೆ ಸಹಾಯ ಮಾಡಲು ಹೊರಟಿದ್ದಾರೆ.

ಹನನ್ಯಾ ನಫ್ತಾಲಿ ಎಂಬ ಇಸ್ರೇಲ್​ ಪತ್ರಕರ್ತ ಈ ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಹನನ್ಯಾ ನಫ್ತಾಲಿ ತನ್ನ ಪತ್ನಿಯನ್ನು ಅಪ್ಪಿಕೊಂಡಿರುವ ಫೋಟೋವನ್ನು ಪೋಸ್ಟ್​​ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಈ ಖಾತೆಯನ್ನು ತನ್ನ ಪತ್ನಿ ನಿರ್ವಹಿಸುತ್ತಾಳೆ ಎಂದು ಹೇಳಿಕೊಂಡಿದ್ದಾರೆ.

Share Post