International

ಮೂರು ದೇಶಗಳಲ್ಲಿ ಭಾರಿ ಭೂಕಂಪನ; ರಿಕ್ಟರ್‌ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲು

ನವದೆಹಲಿ: ಈಶಾನ್ಯ ತೈವಾನ್‌, ನೈರುತ್ಯ ಜಪಾನ್‌ ಪ್ರಾಂತ್ಯಗಳ ನಡುವಿನ ಸಮುದ್ರದಲ್ಲಿ ಇಂದು ಬೆಳಗ್ಗೆ ಭಾರಿ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 11.53ರ ಸುಮಾರಿಗೆ ಈ ಪ್ರಾಂತ್ಯದಲ್ಲಿ ಭೂಮಿ ದೊಡ್ಡ ಮಟ್ಟದಲ್ಲಿ ಕಂಪಿಸಿದೆ. ಇದನ್ನು ಯೂರೋಪ್‌ ಭೂಕಂಪನ ಕೇಂದ್ರ ಅಧಿಕಾರಿಗಳು ದೃಢೀಕರಿಸಿದ್ದಾರೆ. 

 

ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರ 6.6ರಷ್ಟು ದಾಖಲಾಗಿದೆ ಎಂದು ತಿಳಿದುಬಂದಿದೆ. ಅಮೆರಿಕ,  ಸೌತ್‌ ಕರೋಲಿ ಸೇರಿದಂತೆ ವಿವಿಧ ದೇಶಗಳಲ್ಲೂ ಭೂಮಿ ಕಂಪಿಸಿದೆ. ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಭುಮಿ ಕಂಪಿಸಿದ್ದರಿಂದ ಆತಂಕ ಮನೆ ಮಾಡಿತ್ತು. ಆದ್ರೆ ಇದ್ರಿಂದ ಸುನಾಮಿ ಏಳುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

Share Post