International

ಇಂಡೋನೇಷ್ಯಾದಲ್ಲಿ ಮುಳುಗಿದ ದೋಣಿ; 26 ಮಂದಿ ನಾಪತ್ತೆ

ಜಕಾರ್ತಾ; ಇಂಡೊನೇಷ್ಯಾದ ಕರಾವಳಿಯಲ್ಲಿ ದೋಣಿ ದುರಂತ ನಡೆದಿದೆ. ಸಾಗರದಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿಯಲ್ಲಿ ಇಂಧನ ಖಾಲಿಯಾಗಿದ್ದು, ಅದು ಮುಳುಗಿದೆ. ಈ ಘಟನೆಯಲ್ಲಿ ದೋಣಿಯಲ್ಲಿದ್ದ 26 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಲವೆಸಿ ಮತ್ತು ಬೊರ್ನಿಯೊ ದ್ವೀಪಗಳನ್ನು ಬೇರ್ಪಡಿಸುವ ಮಕಾಸ್ಸರ್ ಜಲಸಂಧಿಯಲ್ಲಿ ಗುರುವಾರ ಹಡಗು ಮುಳುಗಿತು. ಅದು 43 ಜನರನ್ನು ಹೊತ್ತೊಯ್ಯುತ್ತಿತ್ತು. ಅದರಲ್ಲಿ ಹದಿನೇಳು ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಪತ್ತೆಯಾದ ಇತರರನ್ನು ಹುಡುಕಲು ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯ ನಡೆಯುತ್ತಿದೆ.

Share Post