International

ಚೀನಾದಲ್ಲಿ ಕಲ್ಲಿದ್ದಲು ಗಣಿ ಕುಸಿತ: 14ಮಂದಿ ಬಲಿ, ಮುಂದುವರೆದ ಕಾರ್ಯಾಚರಣೆ

ಚೀನಾ:  ಚೀನಾದಲ್ಲಿ ಕಲ್ಲಿದ್ದಲು ಗಣಿ ಕುಸಿದು 14 ಜನ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ನೈಋತ್ಯ ಚೀನಾದ ಗೈಝೌ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸುಮಾರು 14 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 25 ರಂದು ಸಾನ್ಹೆ ಶಾಂಗ್‌ಝೌ ಕಲ್ಲಿದ್ದಲು ಗಣಿ ಕುಸಿದು ಕಾರ್ಮಿಕರು ಅವಶೇಷಗಳಡಿ ಸಿಕ್ಕಿಬಿದ್ದಿದ್ದರು. ತಕ್ಷಣವೇ ತುರ್ತು ರಕ್ಷಣಾ ಕಾರ್ಯಾಚರಣೆ ಮಾಡಲಾಯಿತು. ಅಂದಿನಿಂದ ಇಲ್ಲಿವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಲೇ ಇದೆ.  ಕಲ್ಲಿದ್ದಲು ಗಣಿ ಅಪಘಾತಗಳು ಚೀನಾದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ಗಣಿಗಳಲ್ಲಿ ಅನೇಕ ಕಾರ್ಮಿಕರು ಜೀವಂತ ಸಮಾಧಿಯಾಗುತ್ತಿದ್ದಾರೆ. ಈ ಕ್ರಮದಲ್ಲಿ 10 ದಿನಗಳ ಹಿಂದೆ ನೈಋತ್ಯ ಚೀನಾದಲ್ಲಿ ಕಲ್ಲಿದ್ದಲು ಗಣಿ ಕೂಡ  ಕುಸಿದಿದೆ.

ಗಣಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಧಿಕಾರಿಗಳು 10 ದಿನಗಳಿಂದ ನಿರಂತರ ಶ್ರಮಿಸುತ್ತಿದ್ದಾರೆ. ಆದರೆ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇಲ್ಛಾವಣಿ, ಗಣಿ ಪ್ರವೇಶದಿಂದ ಸುಮಾರು 3 ಕಿಲೋಮೀಟರ್ (1.9 ಮೈಲುಗಳು) ಕುಸಿದಿದೆ. ಕುಸಿದು ಬಿದ್ದ ಮೇಲ್ಛಾವಣಿ ದೊಡ್ಡದಾಗಿರುವುದರಿಂದ ಗಣಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ. ಈ ಪ್ರಕ್ರಿಯೆಯಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿರುವುದು ಭಾನುವಾರ ಬಹಿರಂಗವಾಗಿದೆ.

Share Post