International

ದುಬೈನಲ್ಲಿ ಸ್ಥಾಪನೆಯಾಯ್ತು ಸ್ವತಂತ್ರ ಹಿಂದೂ ದೇವಾಲಯ

ದುಬೈ(ಯುಎಇ):ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ವಿಜಯ ದಶಮಿಗೆ ಒಂದು ದಿನದ ಮೊದಲು ಉದ್ಘಾಟನೆಗೊಂಡಿದೆ. ದುಬೈನ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.

ಯುಎಇಯ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು ಎಂದು ಯುಎಇ ನಿವಾಸಿ ಹಸನ್ ಸಜ್ವಾನಿ ಟ್ವೀಟ್ ಮಾಡಿದ್ದಾರೆ.

Share Post