HealthNational

ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಉಪರಾಷ್ಟ್ರಪತಿ

ನವದೆಹಲಿ; ಮಾಜಿ ಪ್ರಧಾನಿ ದೇವೇಗೌಡರನ್ನು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ದೆಹಲಿಯ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಉಪರಾಷ್ಟ್ರಪತಿಗಳು, ದೇವೇಗೌಡರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಕುಶಲೋಪರಿ ವಿಚಾರಿಸಿದರು.

ಈ ಬಗ್ಗೆ ದೇವೇಗೌಡ ಅವರು ಟ್ವೀಟ್‌ ಮಾಡಿದ್ದು, ಉಪರಾಷ್ಟ್ರತಿ ಭೇಟಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜಗದೀಪ್‌ ಅವರು ನನ್ನಂತೆಯೇ ರೈತ ಕುಟುಂಬದಿಂದ ಬಂದವರಾಗಿದ್ದು, ಅವರು ನನಗೆ ಉತ್ತಮ ಸ್ನೇಹಿತರು ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ.

Share Post