ಪ್ರತಿ ಮನೆಯ ಹೆಣ್ಣು ಮಗಳಿಗೆ ಮಾಸಿಕ 2 ಸಾವಿರ ರೂ.; ಕಾಂಗ್ರೆಸ್ ಭರವಸೆ
ಬೆಂಗಳೂರು; ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಯ ಹೆಣ್ಣು ಮಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿದೆ. ಅದರ ಪೋಸ್ಟರ್ ಅನ್ನು ಪ್ರಿಯಾಂಕಾ ಗಾಂಧಿ ಪ್ರದರ್ಶನ ಮಾಡಿದರು.
ಇದಕ್ಕೆ ಗೃಹಲಕ್ಷ್ಮೀ ಎಂದು ಹೆಸರಿಟ್ಟಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೂಡಲೇ ಈ ಯೋಜನೆ ಜಾರಿಗೆ ತರಲಾಗುವುದು. ಬೆಲೆ ಏರಿಕೆಯಿಂದ ಎಲ್ಲಾ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಪ್ರತಿಮನೆಯ ಹೆಣ್ಣು ಮಗಳಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡಿದರೆ ಸಂಸಾರ ನಡೆಸಲು ಅನುಕೂಲವಾಗುತ್ತದೆ. ಹೀಗಾಗಿ, ಈ ಯೋಜೆನ ಜಾರಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇದಕ್ಕೆ ಗ್ಯಾರೆಂಟಿ ಎಂಬಂತೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರಿಯಾಂಕಾ ಗಾಂಧಿಗೆ ಚೆಕ್ ಒಂದನ್ನು ಹಸ್ತಾಂತರಿಸಿದರು.