Health

India Covid Update : 24ಗಂಟೆಯಲ್ಲಿ 2,51,209 ಕೇಸ್‌ ದೃಢ

ನವದೆಹಲಿ : ದೇಶದಲ್ಲಿ ಇಂದು ವರದಿ ಆಗಿರುವ ಕೇಸ್‌ಗಳ ಪ್ರಮಾಣ ಕೊಂಚ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 2,51,209 ಕೇಸ್‌ಗಳು ದೃಢವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿನ್ನೆ ಗುರುವಾರ ಮತ್ತು ಬುಧವಾರ 2.85 ಕ್ಕೂ ಹೆಚ್ಚು ಕೇಸ್‌ಗಳು ದೃಢವಾಗಿದ್ದವು. ಇಂದಿನ ಕೇಸ್‌ಗಳನ್ನು ನೋಡಿದರೆ ಮೂರನೇ ಅಲೆಯ ಪ್ರಮಾಣ ಕೊಂಚ ತಗ್ಗಿದಂತೆ ತೋರುತ್ತಿದೆ. ಇದರಿಂದ ದೈನಂದಿನ ಕೋವಿಡ್‌ ದೃಢ ಪ್ರಮಾಣ ಶೇ 15.88ಕ್ಕೆ ಇಳಿದಿದೆ.

ಇನ್ನು 24ಗಂಟೆಯ ಅವಧಿಯಲ್ಲಿ 627 ಮಂದಿ ಸೋಂಕಿನಿಂದ ಸಾಚನ್ನಪ್ಪಿದ್ದಾರೆ. 3,47,443 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

 

Share Post