BengaluruHealth

ಜಾನುವಾರುಗಳ ಚರ್ಮದ ಗಂಟು ನಿವಾರಣೆಗೆ 13 ಕೋಟಿ ರೂ. ಅನುದಾನ

ಬೆಂಗಳೂರು; ರಾಜ್ಯದಲ್ಲಿ ಜಾನುವಾರುಗಳು ಚರ್ಮದ ಗಂಟು ರೋಗ ಹೆಚ್ಚು ಹರಡುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ರೋಗದ ನಿವಾರಣೆಗೆ ಔಷಧಿ ಖರೀದಿ ಮಾಡಲು, ಲಸಿಕೆ, ಚಿಕಿತ್ಸೆ ನೀಡಲು ಹಾಗೂ ಮೃತಪಟ್ಟ ಜಾನುವಾರುಗಳು ಪರಿಹಾರ ನೀಡಲು ರಾಜ್ಯ ಸರ್ಕಾರ 13 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಅವರು, ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ. ಮೃತ ಜಾನುವಾರುಗಳ ಪರಿಹಾರಕ್ಕೆ ಈಗಾಗಲೇ 2 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಪರಿಹಾರಕ್ಕಾಗಿ ನೀಡುತ್ತಿದ್ದೇವೆ. ಜಾನುವಾರುಗಳ ಚಿಕಿತ್ಸೆ ಮತ್ತು ಲಸಿಕೆಗೆ 8 ಕೋಟಿ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ರಾಜ್ಯದ 28 ಜಿಲ್ಲೆಗಳ 160 ತಾಲ್ಲೂಕುಗಳಲ್ಲಿ 45,645 ಜಾನುವಾರುಗಳು ರೋಗಕ್ಕೆ ತುತ್ತಾಗಿವೆ. ಇದರಲ್ಲಿ 26,135 ಜಾನುವಾರುಗಳು ಗುಣಮುಖವಾಗಿದ್ದು, 2070 ಜಾನುವಾರುಗಳು ಸಾವಿಗೀಡಾಗಿವೆ.

Share Post