Economy

ಮೊಟ್ಟ ಮೊದಲ ಬಾರಿಗೆ ತಿರುಪತಿ ತಿಮ್ಮಪ್ಪನ ಆಸ್ತಿ ಬಹಿರಂಗ:ಶ್ವೇತಪತ್ರ ಹೊರಡಿಸಿದ ಟಿಟಿಡಿ

ತಿರುಮಲ: ಕಲಿಯುಗ ದೈವ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಏಳು ಬೆಟ್ಟದೊಡೆಯ ತಿರುಪತಿ ತಿಮ್ಮಪ್ಪನ ಆಸ್ತಿ ಬಗ್ಗೆ ಇದೇ ಮೊದಲ ಬಾರಿಗೆ ಟಿಟಿಡಿ ಶ್ವೇತಪತ್ರ ಹೊರಡಿಸಿದೆ. ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯ, ಮುತ್ತು-ರತ್ನ, ಪಂಚಲೋಹ, ಸ್ವದೇಶಿ ಕರೆನ್ಸಿ ಜೊತೆಗೆ ವಿದೇಶಿ ನೋಟುಗಳ ಸಹ ಬೆಟ್ಟದಷ್ಟು ಇದೆಯಂತೆ. ಶ್ರೀವಾರಿಯ ಲೆಕ್ಕವಿಲ್ಲದಷ್ಟು ಆಸ್ತಿ ಬಗ್ಗೆ ಇದುವರೆಗೂ ಯಾರಿಗೂ ತಿಳಿದಿಲ್ಲ ಆದ್ರೆ ಇದೇ ಮೊದಲ ಬಾರಿಗೆ ದೇವಾಲಯದ ಆಡಳಿತ ಮಂಡಳಿ ತಿಮ್ಮಪ್ಪನ ಆಸ್ತಿ ಬಗ್ಗೆ 2ಪುಟಗುಳಳ್ಳ ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ. ಭಕ್ತಾದಿಗಳು ದೇವರಿಗೆ ಅರ್ಪಿಸುವ ಕಾಣಿಕೆಗಳನ್ನು ಪಾರದರ್ಶಕವಾಗಿ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದೆ.

ದೇವಾಲಯದ ಒಟ್ಟು ಆಸ್ತಿ ಸಂಖ್ಯೆ- 1,128

ಒಟ್ಟು ಭೂಮಿ-8,088ಎಕರೆ 89 ಸೆಂಟ್‌

ವ್ಯವಸಾಯ ಭೂಮಿ-233 ಎಕರೆ

ವ್ಯವಸಾಯೇತರ ಭೂಮಿ-895  ಎಕರೆ

ತಿಮ್ಮಪ್ಪನ ಹೆಸರಲ್ಲಿ-2,085 ಎಕರೆ41 ಸೆಂಟ್‌

ಇತರೆ ಕಾರ್ಯಚಟುವಟಿಕೆಗಳ ಭೂಮಿ – 6,003 ಎಕರೆ 48 ಸೆಂಟ್‌

ಇದಲ್ಲದೆ ಆಭರಣ, ನಾಣ್ಯ ಭಕ್ತಾದಿಗಳು ನೀಡಿರುವ ಲೆಕ್ಕವಿಲ್ಲದಷ್ಟು ಕಾಣಿಕೆಗಳು, ಕೆಜಿಗಟ್ಟಲೆ ಬಂಗಾರ, ಬೆಳ್ಳಿ, ಕಂತೆ ಕಂತೆ ನೋಟುಗಳು ಸಹ ತಿಮ್ಮಪ್ಪನ ಆದಾಯದ ಮೂಲದಲ್ಲಿ ಸೇರಿದೆ. ಹೆಚ್ಚಿನ ಮಾಹಿತಿಗಾಗಿ ಟಿಟಿಡಿ ವೆಬ್‌ಸೈಟ್‌ ನೋಡಿ www.tirumala.org

 

 

 

Share Post