ಭಾರತೀಯರಲ್ಲಿ ಉಳಿತಾಯ ಕುಸಿತ, ಸಾಲಗಳು ಹೆಚ್ಚಳ; ಯಾಕೆ ಹೀಗಾಗ್ತಿದೆ..?
ವಾಸ್ತವವಾಗಿ ಭಾರತೀಯರು ಅನಗತ್ಯವಾಗಿ ಖರ್ಚು ಮಾಡುವವರಲ್ಲ.. ಹಣವನ್ನು ಉಳಿತಾಯ ಮಾಡುವುದರಲ್ಲಿ ಭಾರತೀಯರನ್ನು ಮೀರಿಸುವವರು ಯಾರೂ ಇಲ್ಲ.. ಭಾರತೀಯರು ಮುಂದಾಲೋಚನೆ ಉಳ್ಳವರು.. ತಮಗಾಗಿ ಖರ್ಚು ಮಾಡದೇ, ತಮ್ಮ ಮಕ್ಕಳಿಗಾಗಿ ಕೂಡಿಡುತ್ತಾರೆ.. ಇತ್ತೀಚಿನ ತನಕ ಪ್ರಪಂಚದ ಎಲ್ಲರಲ್ಲೂ ಇದೇ ಅಭಿಪ್ರಾಯ ಇತ್ತು.. ಯಾಕಂದ್ರೆ ಭಾರತೀಯ ಶತಮಾನಗಳಿಂದಲೂ ಉಳಿತಾಯ ಮಾಡುವುದರಲ್ಲಿ ಪ್ರವೀಣರು.. ಸರಳ ಜೀವನಕ್ಕೆ ಹೆಸರಾದವರು.. ಆದ್ರೆ ಇತ್ತೀಚಿನ ದಿನಗಳ ಭಾರತೀಯರ ಜೀವನಶೈಲಿ ತದ್ವಿರುದ್ಧವಾಗಿ ಬದಲಾಗಿದೆ.. ಭಾರತೀಯರು ಉಳಿತಾಯ ಮಾಡುವುದರ ಬದಲಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ..
ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ದೇಶದಲ್ಲಿ ಕುಟುಂಬಗಳ ನಿಖರ ಉಳಿತಾಯ ಕಳೆದ 47 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.. ನಮ್ಮ ಬಳಿ ಇರುವ ಒಟ್ಟು ನಗದು, ಬ್ಯಾಂಕ್‌ಗಳು ಸೇರಿ ವಿವಿಧ ಕಡೆ ಮಾಡಿರುವ ಹೂಡಿಕೆಗಳಿಂದ ಸಾಲಗಳನ್ನು ಕಳೆದರೆ ಉಳಿಯುವ ಮೊತ್ತವೇ ಈ ನಿಖರ ಉಳಿತಾಯ.. ಇದು ದೊಡ್ಡ ಮಟ್ಟದಲ್ಲಿ ಕುಸಿದಿದೆ ಅಂತ ರಿಸರ್ವ್ ಬ್ಯಾಂಕ್ ವರದಿ ಹೇಳುತ್ತಿದೆ..
ಉಳಿತಾಯಕ್ಕಿಂತ ಸಾಲಗಳೇ ಹೆಚ್ಚು..!;
2022-23ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯಲ್ಲಿ ಉಳಿತಾಯದ ಬೆಲೆ ಶೇಕಡಾ 5.3ಕ್ಕೆ ಇಳಿದಿದೆ.. 2021-22ರಲ್ಲಿ ಅದು ಶೇ.7.3ರಷ್ಟಿತ್ತು ಅಂತ ರಿಸರ್ವ್ ಬ್ಯಾಂಕ್ ವರದಿ ಹೇಳುತ್ತೆ.. ಅಂದರೆ ಭಾರತದಲ್ಲಿ ಬಹುತೇಕ ಕುಟುಂಬಗಳು ಉಳಿತಾಯ ಮಾಡುವುದರ ಬದಲು ಸಾಲಗಳನ್ನು ಮಾಡಿ ಜೀವನ ನಡೆಸುತ್ತಿವೆ.. ಗಳಿದ್ದನ್ನೆಲ್ಲಾ ಸಾಲಗಳನ್ನು ತೀರಿಸೋದಕ್ಕಾಗಿಯೇ ವ್ಯಯ ಮಾಡುತ್ತಿವೆ..
2022-23ರ ಆರ್ಥಿಕ ವರ್ಷದಲ್ಲಿ ದೇಶದ ಜನರ ಒಟ್ಟು ಸಾಲಗಳು ದೇಶದ ಜಿಡಿಪಿಯ ಶೇಕಡಾ 5.8ರಷ್ಟಿವೆ.. 1970ರ ನಂತರ ಸಾಲಗಳು ಈ ಮಟ್ಟಿಗೆ ಬೆಳೆದಿರೋದು ಇದೇ ಮೊದಲು ಎಂದು ಹೇಳಲಾಗುತ್ತಿದೆ..
ಕೊಳ್ಳುಬಾಕ ಸಂಸ್ಕೃತಿಯಿಂದ ಸಾಲಗಳು ಹೆಚ್ಚಳ;
ದಶಕಗಳ ಹಿಂದೆ ಜನರು ಎಷ್ಟು ಕಡಿಮೆ ಗಳಿಸಿದರೂ ಅದರಲ್ಲೇ ಉಳಿತಾಯ ಮಾಡಿ, ಉಳಿದಿದ್ದರಲ್ಲಿ ಜೀವನ ನಡೆಸುತ್ತಿದ್ದರು.. ಆದ್ರೆ ಈಗ ಮನುಷ್ಯನಿಗೆ ಅವಶ್ಯಕತೆಗಳು ಹೆಚ್ಚಾಗುತ್ತಿವೆ.. ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಮನುಷ್ಯ ಗಳಿಕೆ ಮಾಡುವುದರ ಬದಲಾಗಿ ಸಾಲದ ಮೊರೆ ಹೋಗುತ್ತಿದ್ದಾರೆ.. ಸಾಲಗಳು ಕೂಡಾ ಸುಲಭವಾಗಿ ಸಿಗುತ್ತಿರುವುದರಿಂದ ಬೇಡವಾದ್ದನ್ನೆಲ್ಲಾ ಕೊಳ್ಳುತ್ತಿದ್ದಾನೆ.. ಹೀಗೆ ಮನುಷ್ಯನ ದುರಾಸೆಯಿಂದ ಸಾಲಗಳು ಹೆಚ್ಚಾಗುತ್ತಿವೆ.. ಉಳಿತಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ.. ಸಂಪಾದಿಸಿದ್ದೆಲ್ಲಾ ಇಎಂಐ ಕಟ್ಟೋದಕ್ಕೇ ಹೋಗುತ್ತಿರುವುದರಿಂದ ಉಳಿತಾಯ ಮಾಡೋದಕ್ಕೆ ಹಣವೇ ಉಳಿಯುತ್ತಿಲ್ಲ..
ಯಾವುದೇ ಶ್ಯೂರಿಟಿ ಇಲ್ಲದ ಲೋನ್‌ಗಳ ಸಂಖ್ಯೆ ತುಂಬಾನೇ ಹೆಚ್ಚಾಗುತ್ತಿದೆ.. ನಮಗೆ ಸಂಬಳ ಬರುವ ಆದಾಯ ಇದ್ದರೆ ಯಾವುದೇ ಶ್ಯೂರಿಟಿ ಇಲ್ಲದೆ ಸಾಲಗಳು ಸಿಗುತ್ತದೆ.. ಬ್ಯಾಂಕ್‌ಗೂ ಹೋಗಬೇಕಾದ ಅವಶ್ಯಕತೆ ಇಲ್ಲ.. ಮೊಬೈಲ್‌ನಲ್ಲೇ ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು.. ಹೀಗೆ ಸುಲಭವಾಗಿ ಸಾಲಗಳು ಸಿಗೋದ್ರಿಂದ ಹೆಚ್ಚಾಗಿ ಜನ ಸಾಲ ಪಡೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ..
ವಿದ್ಯೆ, ಆರೋಗ್ಯ, ವಿಲಾಸಿ ಜೀವನಕ್ಕೆ ಹೆಚ್ಚು ಖರ್ಚು!;
ಭಾರತದಲ್ಲಿ ಅನೇಕ ಕುಟುಂಬಗಳು ಈಗ ಕ್ರೆಡಿಟ್ ಕಾರ್ಡ್‌ಗಳು, ಪರ್ಸನಲ್ ಸಾಲಗಳ ಸುಳಿಯಲ್ಲಿ ಸಿಲುಕಿವೆ.. ಕ್ರೆಡಿಟ್ ಕಾರ್ಡ್ ಮೂಲಕ ಏನು ಬೇಕಾದರೂ ಕೊಳ್ಳುವುದಕ್ಕೆ ಅವಕಾಶವಿರುವುದರಿಂದ ಜನ ವಾಷಿಂಗ್ ಮಷಿನ್‌ಗಳು, ಎಸಿಗಳು, ಟಿವಿಗಳು, ರೆಫ್ರಿಜರೇಟರ್‌ಗಳು, ಓವೆನ್‌ಗಳು ಹೀಗೆ ಮನೆಗೆ ಬೇಕಾದ್ದು, ಬೇಡವಾದದ್ದು ಎಲ್ಲವನ್ನೂ ಕೊಂಡು ತರುತ್ತಿದ್ದಾರೆ.. ಇದರ ಇಎಂಐಗಳನ್ನು ಕಟ್ಟೋಕೆ ಆಗದೇ ಪರದಾಡುತ್ತಿದ್ದಾರೆ.. ಇನ್ನು ವಿವಾಹಗಳು, ಚಿಕಿತ್ಸೆಗಳಿಗಾಗಿ ಕೂಡಾ ಸಾಲಗಳು ತೆಗೆದುಕೊಳ್ಳುತ್ತಿದ್ದಾರೆ..
ಭಾರತದ 5 ನೇ ಅತಿದೊಡ್ಡ ಆರ್ಥಿಕತೆ;
ಭಾರತ ಈಗ ಪ್ರಪಂಚದಲ್ಲೇ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ.. ಅದು ಶೀಘ್ರದಲ್ಲೇ ಮೂರನೇ ಸ್ಥಾನ ಹೋಗುತ್ತದೆ ಎಂದು ಹೇಳಲಾಗುತ್ತಿದೆ.. ಭಾರತದ ಆರ್ಥಿಕತೆ ಹೆಚ್ಚಾಗುತ್ತಿದ್ದರೂ, ದೇಶದ ಜನರ ತಲಾದಾಯ ಹೆಚ್ಚಾಗುತ್ತಿಲ್ಲ.. ಇದಕ್ಕೆ ಕಾರಣ ಭಾರತದ ಜನರು ಸಂಪಾದನೆಗಿಂತ ಹೆಚ್ಚು ಖರ್ಚು ಮಾಡುತ್ತಿರುವುದು.. ಇದರಿಂದಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿರುವುದು.. ಕಳೆದ ದಶಕದ ವರದಿ ನೋಡೋದಾದರೆ ದೊಡ್ಡ ಮತದ ಸಾಲಗಳು ತೆಗೆದುಕೊಂಡವರ ಸಂಖ್ಯೆಗಿಂತ ಸಣ್ಣ ಸಾಲಗಳನ್ನು ಪಡೆದವರ ಸಂಖ್ಯೆಯೇ ಹೆಚ್ಚಿದೆ.. ಅಂದರೆ, ಅವಶ್ಯಕತೆಗಳಿಗಾಗಿ ಖರ್ಚು ಮಾಡುವುದಕ್ಕೆ ಸಾಲ ತೆಗೆದುಕೊಳ್ಳುವವರು ಹೆಚ್ಚಾಗಿದ್ದು, ಬ್ಯುಸಿನೆಸ್ ಮಾಡುವುದಕ್ಕೆ, ಉದ್ಯಮದಲ್ಲಿ ಹೂಡಿಕೆ ಮಾಡುವುದಕ್ಕೆ ಸಾಲ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ..