ಮದ್ಯ ಸೇವಿಸುವುದರ ಮೂಲಕ ಶ್ರೀಮಂತನಾದ ಪ್ರಪಂಚದ ಏಕೈಕ ವ್ಯಕ್ತಿ ಈತ!
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ.. ದೇಹಕ್ಕೆ ಮಾತ್ರವಲ್ಲ, ಜೇಬಿಗೂ ಕೂಡಾ ಕತ್ತರಿ.. ಇದು ಹಣಕಾಸಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಜೊತೆಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.. ಮದ್ಯಪಾನದಿಂದ ನಾಶವಾದ ಕುಟುಂಬಗಳ ಸಂಖ್ಯೆ ಅಸಂಖ್ಯಾತ.. ಆದ್ರೆ, ಇಲ್ಲೊಬ್ಬ ವ್ಯಕ್ತಿ ಇದ್ದಾನೆ.. ಆತನಿಗಿರುವ ಕುಡಿತದ ಚಟವೇ ಆತ ಹಣೆ ಬರಹ ಬದಲಾಯಿಸಿದೆ.. ಆತ ಮದ್ಯ ಸೇವನೆಯಿಂದಲೇ ಶ್ರೀಮಂತನಾಗಿದ್ದಾನೆ.. ಇದು ವಿಚಿತ್ರ ಎನಿಸಿದರೂ ಸತ್ಯ..
ಬ್ರಿಟನ್ ನಿವಾಸಿ 65 ವರ್ಷದ ನಿಕ್ ವೆಸ್ಟ್ ಕಳೆದ 42 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿದ್ದಾರೆ.. ಆತನಿಗೆ ಬಿಯರ್ ಕ್ಯಾನ್ ಸಂಗ್ರಹಿಸುವುದು ಒಂದು ಹವ್ಯಾಸ.. ಈ ಹವ್ಯಾಸದಿಂದಾಗಿ, ನಿಕ್ ವೆಸ್ಟ್ ತನ್ನ ಮನೆಯಲ್ಲಿ 10,300 ಬೀಯರ್ ಕ್ಯಾನ್‌ಗಳನ್ನು ಸಂಗ್ರಹಿಸಿದ್ದಾನೆ. ಅವುಗಳಲ್ಲಿ ಕೆಲವು ಅಪರೂಪದ ಬಿಯರ್ ಕ್ಯಾನ್‌ಗಳಾಗಿವೆ. ನಿಕ್ ವೆಸ್ಟ್ ಅವರು 16 ವರ್ಷದವರಾಗಿದ್ದಾಗ ಗೆಳೆಯರೊಂದಿಗೆ ಮದ್ಯ ಸೇವಿಸುವ ಚಟಕ್ಕೆ ಬಿದ್ದಿದ್ದಾನೆ. ಕ್ರಮೇಣ ಕುಡಿತದ ಚಟಕ್ಕೆ ಬಿದ್ದು ವಿಪರೀತವಾಗಿ ಬಿಯರ್ ಕುಡಿಯಲು ಆರಂಭಿಸಿದ್ದಾನೆ.. ಇದರ ಜೊತೆಜೊತೆಗೆ ಬಿಯರ್ ಖಾಲಿ ಕ್ಯಾನ್‌ಗಳ ಸಂಗ್ರಹ ಮಾಡಲು ಶುರು ಮಾಡಿದ್ದಾರೆ.. ಈ ಹವ್ಯಾಸವೇ ಆತನನ್ನು ಶ್ರೀಮಂತನನ್ನಾಗಿಸಿದೆ..
ಖಾಲಿ ಬಿಯರ್ ಕ್ಯಾನ್‌ಗಳಿಂದ ಲಕ್ಷ ಲಕ್ಷ ಹಣ!;
ನಿಕ್ ವೆಸ್ಟ್ ಬಿಯರ್ ಕುಡಿಯುತ್ತಲೇ ಖಾಲಿ ಬಿಯರ್ ಕ್ಯಾನ್ ಗಳನ್ನು ಸಂಗ್ರಹ ಮಾಡುತ್ತಿದ್ದ.. ಅದು ಎಷ್ಟರ ಮಟ್ಟಿಗೆ ಎಂದರೆ ಬಿಯರ್ ಕ್ಯಾನ್‌ಗಳಿಂದ ಇಡೀ ಮನೆಯೇ ತುಂಬಿಹೋಗುವಷ್ಟು.. ಹೀಗಾಗಿ ನಿಕ್ ಐದು ಕೊಠಡಿಗಳ ಮನೆ ಮಾಡಿ ಅಲ್ಲಿಗೆ ಶಿಫ್ಟ್ ಆದ.. ಒಂದು ದಿನ ಕೆಲದಿಂದ ನಿವೃತ್ತಿ ಹೊಂದಿದ ಮೇಲೆ ಬಿಯರ್ ಕುಡಿಯಲು ಆತನ ಬಳಿ ಹಣವೇ ಇಲ್ಲದಂರಾಗುತ್ತದೆ.. ಆಗ ತಾನು ಬಚ್ಚಿಟ್ಟಿದ್ದ ಕೆಲವು ತ್ಯಾಜ್ಯ ವಸ್ತುಗಳನ್ನು ಮಾರಾಟ ಮಾಡಲು ನಿರ್ಧರಿಸುತ್ತಾರೆ.. ಹೀಗೆ ಖಾಲಿ ಬಿಯರ್ ಬಾಟಲ್‌ಗಳ ಮೊದಲ 6000 ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಾರೆ.. ಅವು ಅಪರೂಪದ ಡಬ್ಬಿಗಳಾಗಿದ್ದರಿಂದ 13500 ಡಾಲರ್ ಅಂದರೆ 14 ಲಕ್ಷ ರೂಪಾಯಿಗೆ ಸೇಲ್ ಆಗುತ್ತದೆ..
ನಿಕ್ ವೆಸ್ಟ್ ನಂತರ ಇಟಲಿಯಲ್ಲಿ ಬಿಯರ್ ಕ್ಯಾನ್ ವಿತರಕರಿಗೆ 1,800 ಕ್ಯಾನ್‌ಗಳನ್ನು ಮಾರಾಟ ಮಾಡಿದರು. ಆಗ ಅವರು $12,500 (ರೂ. 10,43,526) ಪಡೆದರು. ಆದರೆ ನಿಕ್ ವೆಸ್ಟ್ ಹೆಚ್ಚಿನ ಕ್ಯಾನ್‌ಗಳನ್ನು ಬ್ರಿಟಿಷ್ ಮ್ಯೂಸಿಯಂಗೆ ದಾನ ಮಾಡಿದರು. ಇಲ್ಲದಿದ್ದರೆ ಇನ್ನೂ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..