ಪಾಕಿಸ್ತಾನದಲ್ಲಿ ತೀವ್ರ ಇಂಧನದ ಕೊರತೆ; 48 ವಿಮಾನಗಳು ರದ್ದು!
ಇಸ್ಲಾಮಾಬಾದ್; ಪಾಕಿಸ್ತಾನದಲ್ಲಿ ತೀವ್ರ ಇಂಧನದ ಕೊರತೆ ಏರ್ಪಟ್ಟಿದೆ. ವಿಮಾನಗಳ ಹಾರಾಟ ನಡೆಸೋದಕ್ಕೂ ಇಂಧನ ಸಿಗ್ತಿಲ್ಲ. ಈ ಹಿನ್ನೆಲೆಯಲ್ಲಿ 48 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಬಾಕಿ ಉಳಿದಿರುವ ಪಾವತಿಗಳಿಂದಾಗಿ ಇಂಧನ ಪೂರೈಕೆ ನಿಲ್ಲಿಸಲಾಗಿರುವುದರಿಂದ ಈ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, 48 ವಿಮಾನಗಳನ್ನು ರದ್ದುಗೊಳಿಸಿದೆ. ಇದರಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟಗಳೂ ಸೇರಿವೆ. 13 ದೇಶೀಯ ವಿಮಾನಗಳು ಮತ್ತು 11 ಅಂತಾರಾಷ್ಟ್ರೀ ಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳನ್ನು ರದ್ದು ಮಾಡಲಾಗಿದೆ.