CrimeDistricts

ಕರುವಿನ ಮೇಲೆ ಯುವಕನಿಂದ ಅತ್ಯಾಚಾರ; ಆರೋಪಿ ಅರೆಸ್ಟ್‌

ರಾಯಚೂರು; ಹಸುವಿನ ಕರುವಿನ ಮೇಲೆ ಅನೈಸರ್ಕಿಕ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪಿಯನ್ನು ರಾಯಚೂರಿನ ಲಿಂಗಸಗೂರು ಪೊಲೀಸರು ಬಂಧಿಸಿದ್ದಾರೆ. ಇಮ್ತಿಯಾಜ್‌ ಎಂಬಾತನೇ ಬಂಧಿತ ಆರೋಪಿ. 

ಆಟೋ ಓಡಿಸುತ್ತಿದ್ದ ಈ ವಿಕೃತ ಕಾಮಿ ಇಮ್ತಿಯಾಜ್‌ ಪ್ರತಿದಿನ ತೋಟದ ಮನೆಯಲ್ಲಿ ಮಲಗುತ್ತಿದ್ದನಂತೆ. ಕಳೆದ ರಾತ್ರಿ ಯಾರು ಇಲ್ಲದ ವೇಳೆ ಅಮರೇಶ್‌ ಎಂಬುವವರಿಗೆ ಸೇರಿದ ಹಸುವಿನ ಕರುವಿನ ಕಾಲು ಕಟ್ಟಿ ಅತ್ಯಾಚಾರ ಎಸಗಿದ್ದಾನೆ.

ಇಮ್ತಿಯಾಜ್ ನ ಈ ಕೃತ್ಯವನ್ನು ಅಮರೇಶ್‌ ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.  ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

 

Share Post